Friday, November 28, 2025
Google search engine

HomeUncategorizedರಾಷ್ಟ್ರೀಯಭಾರತಕ್ಕೆ ಆಗಮಿಸಲಿರುವ ರಷ್ಯಾ ಅಧ್ಯಕ್ಷ ಪುಟಿನ್

ಭಾರತಕ್ಕೆ ಆಗಮಿಸಲಿರುವ ರಷ್ಯಾ ಅಧ್ಯಕ್ಷ ಪುಟಿನ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಡಿಸೆಂಬರ್ 4 ಮತ್ತು 5ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿದ್ದು,. ಡಿಸೆಂಬರ್ 5ರಂದು ನಡೆಯುವ 23ನೇ ಭಾರತ-ರಷ್ಯಾ ಸಮ್ಮೇಳನದಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಪುಟಿನ್ ಮತ್ತು ಮೋದಿ ನಡುವಿನ ಮಾತುಕತೆಯಲ್ಲಿ ಎರಡು ದೇಶದ ಸಂಬಂಧಗಳು ಮತ್ತು ಜಾಗತಿಕ ವಿಷಯಗಳ ಬಗ್ಗೆ ಆಳವಾದ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಮಾಸ್ಕೋ ಪ್ರವಾಸದಲ್ಲಿ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋವ್ ಭೇಟಿಯಾಗಿ ದಿನಾಂಕ ನಿಗದಿ ಪಡಿಸಿದ್ದರು.

ರಷ್ಯಾ-ಉಕ್ರೇನ್ ಸಂಘರ್ಷ, ಮಧ್ಯಪ್ರಾಚ್ಯದ ಉದ್ದೇಶಗಳು ಮತ್ತು ಆಫ್ಘಾನಿಸ್ತಾನದಂತಹ ವಿಷಯಗಳಲ್ಲಿ ಭಾರತ ಶಾಂತಿ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಹಾಗೂ ಸಂಘರ್ಷಗಳಿಗೆ ತ್ವರಿತ ಮುಕ್ತಾಯವನ್ನು ಬಯಸುತ್ತದೆ ಎಂದು ತಿಳಿಸಿದ್ದಾರೆ. ಈ ಸಮ್ಮೇಳನವು 23ನೇ ಸಭೆಯಾಗಿದ್ದು, ರಾಜಕೀಯ, ಆರ್ಥಿಕ, ರಕ್ಷಣೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಬಾಂಧವ್ಯವನ್ನು ಪರಿಶೀಲಿಸಲಾಗುತ್ತದೆ ಎಂದಿದ್ದಾರೆ.

ಪ್ರಧಾನಿ ಮೋದಿಯ ಕಡೆಯ ಮಾಸ್ಕೋ ಪ್ರವಾಸವೂ ಕಳೆದ ವರ್ಷದ ಜುಲೈನಲ್ಲಿ ನಡೆದಿತ್ತು. ಈ ವೇಳೆ ಶಕ್ತಿ ಸಹಕಾರ ಮತ್ತು ರಕ್ಷಣಾ ತಂತ್ರಜ್ಞಾನಗಳ ಬಗ್ಗೆ ಒಪ್ಪಂದಗಳಾಗಿವೆ ಎಂದು ಜಾಗತಿಕ ರಾಜಕೀಯ ಒತ್ತಡಗಳು ಮತ್ತು ಮಾರ್ಗಸೂಚಿಗಳ ನಡುವೆ, ರಷ್ಯಾ ತೈಲ ಆಮದುಗಳಿಗೆ ಸಂಬಂಧಿಸಿದ ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕಗಳನ್ನು ಎದುರಿಸುತ್ತಿರುವಾಗ ಈ ಭೇಟಿ ಇನ್ನಷ್ಟು ಮಹತ್ವ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

RELATED ARTICLES
- Advertisment -
Google search engine

Most Popular