Monday, December 1, 2025
Google search engine

Homeಅಪರಾಧಬೆಳಗಾವಿ: ವಿದ್ಯಾರ್ಥಿನಿ ಮೇಲೆ 2 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ; ಶಿಕ್ಷಕನ ಬಂಧನ.

ಬೆಳಗಾವಿ: ವಿದ್ಯಾರ್ಥಿನಿ ಮೇಲೆ 2 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ; ಶಿಕ್ಷಕನ ಬಂಧನ.

ವರದಿ :ಸ್ಟೀಫನ್ ಜೇಮ್ಸ್.

ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದನು. ನಾನು ಕರೆದಾಗ ಬರಬೇಕು. ಲಿವ್ ಇನ್ ರಿಲೇಶನ್ ಶಿಪ್ ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದನು.

ಬೆಳಗಾವಿ: ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಬೆಳಗಾವಿಯ ಖಾಸಗಿ ಕಾಲೇಜಿನ ಉಪನ್ಯಾಸಕ ನಾಗೇಶ್ವರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆತನ ವಿರುದ್ಧ ಕ್ಯಾಂಪ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ನಾಗೇಶ್ವರ್ ವಿದ್ಯಾರ್ಥಿಯ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದನು. ಅಲ್ಲದೆ ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದನು. ನಾನು ಕರೆದಾಗ ಬರಬೇಕು. ಲಿವ್ ಇನ್ ರಿಲೇಶನ್ ಶಿಪ್ ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಿದ್ದನು. ಅಲ್ಲದೆ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಸಲುವಾಗಿ ಬಾಡಿಗೆ ಮನೆಯೊಂದನ್ನು ಮಾಡಿಕೊಂಡಿದ್ದನು. ನಾಗೇಶ್ವರ್ ಆಟಾಟೋಪಗಳು ಮಿತಿ ಮೀರಿದ್ದರಿಂದ ಸಂತ್ರಸ್ತ ಬಾಲಕಿ ವಿಷಯವನ್ನು ಪೋಷಕರ ಬಳಿ ಹೇಳಿಕೊಂಡಿದ್ದಳು.

RELATED ARTICLES
- Advertisment -
Google search engine

Most Popular