Monday, December 1, 2025
Google search engine

Homeರಾಜಕೀಯಪಠ್ಯ ಪುಸ್ತಕಗಳಲ್ಲಿ 'ಭಗವದ್ಗೀತೆ' ಸೇರಿಸಲು ಕೇಂದ್ರಕ್ಕೆ ಎಚ್.ಡಿ.ಕೆ ಒತ್ತಾಯ

ಪಠ್ಯ ಪುಸ್ತಕಗಳಲ್ಲಿ ‘ಭಗವದ್ಗೀತೆ’ ಸೇರಿಸಲು ಕೇಂದ್ರಕ್ಕೆ ಎಚ್.ಡಿ.ಕೆ ಒತ್ತಾಯ

ಶಿವಮೊಗ್ಗ: ಶಾಲಾ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸಬೇಕು. ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ನಡೆದ ಭಗವದ್ಗೀತಾ ಅಭಿಯಾನ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಭಗವದ್ಗೀತೆಯನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು. ಬಳಿಕ ಮಾತನಾಡಿದ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಕ್ರಮಗಳನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ.

ಶಾಲಾ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಲು ರಾಮಾಯಣ ಮತ್ತು ಮಹಾಭಾರತವನ್ನು ಕಲಿಕೆ ಬಹಳ ಸಹಾಯಕ. ಸಮಾಜದಲ್ಲಿ ಹಿಂಸೆ, ಕಾನೂನುಬಾಹಿರ ಕೃತ್ಯಗಳು ಮತ್ತು ಅಶಾಂತಿ ದೈನಂದಿನ ವ್ಯವಹಾರವಾಗಿ ಮಾರ್ಪಟ್ಟಿರುವುದರಿಂದ ಮಕ್ಕಳಿಗೆ ಭಗವದ್ಗೀತೆ ಕಲಿಸುವುದು ಅಗತ್ಯವಾಗಿದೆ. ಸಮಾಜದಲ್ಲಿ ಶಾಂತಿ ಕಾಪಾಡಲು ಈ ಪೀಳಿಗೆಗೆ ಭಗವದ್ಗೀತೆ ಮಾರ್ಗದರ್ಶನದ ಬೆಳಕಾಗಿದೆ ಎಂದರು.

ನಂತರ ಮಾತನಾಡಿದ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಪ್ರತಿಯೊಬ್ಬರೂ ಭಗವದ್ಗೀತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಭಗವದ್ಗೀತೆ ಭಾರತದಲ್ಲಿ ಹುಟ್ಟಿಕೊಂಡಿತು ಎಂಬುದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ವಿಷಯವಾಗಿದೆ. ಭಗವದ್ಗೀತೆಯ ಮೌಲ್ಯಗಳನ್ನು ಕಲಿಯಲು ಮತ್ತು ಅಳವಡಿಸಿಕೊಳ್ಳಲು ಎಲ್ಲರಿಗೂ ವೇದಿಕೆ ಒದಗಿಸುವುದರಿಂದ ಭಗವದ್ಗೀತೆ ಅಭಿಯಾನವನ್ನು ರಾಷ್ಟ್ರದಾದ್ಯಂತ ವಿಸ್ತರಿಸಬೇಕು ಎಂದು ತಿಳಿಸಿದರು.

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧಿಪತಿ ಗಂಗಾಧರೇಂದ್ರ ಸರಸ್ವತಿ, ಭಗವದ್ಗೀತೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿಸಿದಾಗ, ಅದು ಅಪರಾಧ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೋಮು ಸೌಹಾರ್ದತೆಯನ್ನು ನಿರ್ಮಿಸುವುದು ಈ ಅಭಿಯಾನದ ಪ್ರಮುಖ ಧ್ಯೇಯ. ಇದು ರಾಷ್ಟ್ರೀಯ ಸಮಗ್ರತೆಯನ್ನು ಮತ್ತು ದೇಶದ ವಿದ್ಯಾವಂತ ಯುವಕರಿಗೆ ಮಾರ್ಗದರ್ಶಕ ಬೆಳಕಾಗಿದೆ ಎಂದರು.

ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಜೀವನದ ಮೌಲ್ಯಗಳನ್ನು ತಿಳಿಯಲು ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು. ಇದು ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ ಹಾಗೂ ಸಮಸ್ಯೆಗಳಿಗೆ ಎದುರಿ ಓಡಿಹೋಗಬಾರದು, ಧೈರ್ಯ, ಆತ್ಮವಿಶ್ವಾಸ ಮತ್ತು ಶಕ್ತಿಯಿಂದ ಅವುಗಳನ್ನು ಎದುರಿಸಬೇಕು ಎಂಬುದನ್ನು ಇದು ಕಲಿಸುತ್ತದೆ. ಆರೋಗ್ಯಕರ ಸಮಾಜಕ್ಕಾಗಿ, ಭಗವದ್ಗೀತೆ ಬಹಳ ಅವಶ್ಯಕವಾಗಿದೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular