Monday, December 1, 2025
Google search engine

Homeರಾಜಕೀಯನಾನು ಸಿದ್ದರಾಮಯ್ಯ ಬ್ರದರ್ಸ್ ರೀತಿ ಕೆಲಸ ಮಾಡ್ತೇವೆ : ಡಿಕೆಶಿ

ನಾನು ಸಿದ್ದರಾಮಯ್ಯ ಬ್ರದರ್ಸ್ ರೀತಿ ಕೆಲಸ ಮಾಡ್ತೇವೆ : ಡಿಕೆಶಿ

ಬೆಂಗಳೂರು: ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಸಹೋದರರ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು‌. ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಬ್ರೇಕ್ ಫಾಸ್ಟ್ ಗೆ ಸಿಎಂಗೆ ಆಹ್ವಾನ ವಿಚಾರಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ, ಸಿಎಂ ಸಿದ್ದರಾಮಯ್ಯ ಅವರನ್ನು ಮಂಗಳವಾರ ಉಪಹಾರಕ್ಕೆ ಆಹ್ವಾನ ನೀಡಿದ್ದೇನೆ. ಅದು ನನಗೂ, ಸಿಎಂಗೂ ಸಂಬಂಧಿಸಿದ ವಿಚಾರ‌. ನಾವಿಬ್ಬರು ಬ್ರದರ್ಸ್ ರೀತಿಯಲ್ಲಿ ಕೆಲಸ ‌ಮಾಡ್ತಾ ಇದ್ದೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ ನನ್ನ ಜೊತೆಗೆ 140 ಶಾಸಕರಿದ್ದಾರೆ ಎಂದು ಹೇಳಿದ್ದಾರೆ.

ಹುಟ್ಟುವಾಗ ಒಬ್ಬರೆ ಹುಟ್ಟುತ್ತೇವೆ, ಸಾಯುವಾಗ ಒಬ್ಬರೇ ಸಾಯುತ್ತೇವೆ. ಪಾರ್ಟಿ ಎಂದ ಮೇಲೆ ಎಲ್ಲರೂ ಜೊತೆಗೆ ತೆಗೆದುಕೊಂಡು ಹೋಗಬೇಕು. ನೀವು ಅದರ ಬಗ್ಗೆ ಚಿಂತೆ ಮಾಡಬೇಡಿ ಎಂದು, ಮಾಧ್ಯಮಗಳಲ್ಲಿ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇದೆ ಎಂದು ಪದೇ ಪದೇ ತೋರಿಸಲಾಗುತ್ತಿತ್ತು ಅದಕ್ಕೆ ನಾವು ಬ್ರೇಕ್ ಫಾಸ್ಟ್ ಗೆ ಸೇರಬೇಕಾಯ್ತು ಎಂದು ತಿಳಿಸಿದ್ದಾರೆ.

ದೆಹಲಿಗೆ ಸಿಎಂ ಪ್ರವಾಸ ವಿಚಾದ ಬಗ್ಗೆ, ಮಂಗಳವಾರ ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆಯಲಿರುವ ಬ್ರೇಕ್ ಫಾಸ್ಟ್ ಸಭೆಯಲ್ಲಿ ಪಕ್ಷದ ಗೊಂದಲಗಳ ಜತೆಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ತಿರ್ಮಾನ ಆಗುವ ಸಾಧ್ಯತೆ ಇದ್ದು, ಇಂದಿದಿಂದ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಸಂಸತ್ ನಲ್ಲಿ ರಾಜ್ಯದ ವಿಚಾರಗಳನ್ನು ಪ್ರಸ್ತಾಪಿಸಿ ಕೇಂದ್ರದ ಗಮನಕ್ಕೆ ತರಲು ನಿಯೋಗ ಕೊಂಡೊಯ್ಯುವ ಸಾಧ್ಯತೆ ಇದೆ. ಈ ವಾರದಲ್ಲೇ ದೆಹಲಿಗೆ ಸಿಎಂ ಡಿಸಿಎಂ ಹೋಗಲಿದ್ದು, ಸರ್ವಪಕ್ಷ ಸಭೆ ನಡೆಸಲಿದ್ದಾರೆ. ರಾಜ್ಯದ ಎಲ್ಲ ಸಂಸದರ ಜತೆ ಚರ್ಚೆ ನಡೆಸಿ ಕೇಂದ್ರಕ್ಕೂ ಮನವಿ ಕೊಡುವ ಸಾಧ್ಯತೆ ಇದೆ. ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರನ್ನೂ ಸಿಎಂ-ಡಿಸಿಎಂ ಭೇಟಿ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಈ ವೇಳೆ ಇಬ್ಬರ ನಡುವಿನ ಒಮ್ಮತ ಬಗ್ಗೆ ವರಿಷ್ಠರಿಗೆ ಮಾಹಿತಿ‌ ಕೊಡಲಿದ್ದಾರೆ. ಶೀಘ್ರದಲ್ಲೇ ಗೊಂದಲ‌ ಬಗೆಹರಿಸಲೂ ಮನವಿ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ.

ಡಿಕೆಶಿಯನ್ನು ಕಡೆಗಣಿಸುವ ಹಾಗಿಲ್ಲ : ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ತೀವ್ರಗೊಂಡಿದ್ದರೂ, ಇತ್ತೀಚಿನ ಉಪಾಹಾರ ಸಭೆಯಿಂದ ತಾತ್ಕಾಲಿಕವಾಗಿ ಗೊಂದಲಕ್ಕೆ ತೆರೆ ಬಿದ್ದಿದ್ದೂ, ಇದರ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆರೆಮರೆಯಲ್ಲಿ ಶಾಸಕರ ಬೆಂಬಲವನ್ನು ಗಳಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರೊಂದಿಗೆ ಈಗಾಗಲೇ ಗುರುತಿಸಿಕೊಂಡಿರುವ ಶಾಸಕರ ಸಂಖ್ಯೆಯನ್ನು ಹೆಚ್ಚಿಸಲು ಅವರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಪ್ರಸ್ತುತ, ಡಿ.ಕೆ.ಶಿ ಜೊತೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಷ್ಟು ಶಾಸಕರು ನಿಂತಿದ್ದಾರೆ ಎಂಬುವುದು ಪಕ್ಷದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular