Monday, December 1, 2025
Google search engine

Homeರಾಜ್ಯಸುದ್ದಿಜಾಲಏಡ್ಸ್ ಜಾಗೃತಿಗೆ ಸಮಾಜ ಒಗ್ಗಟ್ಟಾಗಬೇಕು: ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್

ಏಡ್ಸ್ ಜಾಗೃತಿಗೆ ಸಮಾಜ ಒಗ್ಗಟ್ಟಾಗಬೇಕು: ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್

ಹುಣಸೂರು: ನಾವು ಸ್ವಚ್ಚತೆ ಕಾಪಾಡುವುದರ ಜೊತೆಗೆ  ನಮ್ಮ ಸುತ್ತಲಿನ ಪರಿಸರವನ್ನು ಪರಿಣಾಮಕಾರಿಯಾಗಿ ಶುಚಿಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ತಿಳಿಸಿದರು.

ವಿಶ್ವ ಏಡ್ಸ್ ದಿನದ ಅಂಗವಾಗಿ  ನಗರದ ರೋಟರಿ ಸಂಸ್ಥೆಯ ವತಿಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದ  ಅವರು, ವಿಶ್ವದಲ್ಲಿ   ಏಡ್ಸ್ ಕಾಯಿಲೆ ಅಲ್ಲದಿದ್ದರೂ ಏಡ್ಸ್ ಮಾರಕವಾಗಿದ್ದು, ಅರಿವಿನ ಕೊರತೆಯಿಂದ  ಹಲವಾರು ಕಾರಣಕ್ಕೆ ಸಾವಿರಾರು ಜನರು ಆ ರೋಗಕ್ಕೆ ತುತ್ತಾಗಿದ್ದಾರೆ.  ಆದ್ದರಿಂದ ಅದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕೆಲಸವಾಗಬೇಕಿದೆ ಎಂದರು.

ಈಗಾಗಲೇ ರೋಟರಿ ಅಂತರಾಷ್ಟ್ರೀಯ ಸಂಸ್ಥೆ  ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ  ಕೈಜೋಡಿಸಿ ಪೊಲೀಯೊ ನಿರ್ಮೂಲನೆಗೆ  ಕಾರಣವಾಗಿದ್ದು, ಮನುಷ್ಯನ ಮೇಲೆ ಮಾನಸಿಕವಾಗಿ ಕಾಡುವ ಇಂತಹ  ರೋಗದ ಮೇಲೆ ನಾವು ಜಾಗೃತಗೊಂಡು ಕಡಿವಾಣ ಹಾಕಬೇಕಿದೆ ಎಂದರು.

ರೋಟರಿ ಕಾರ್ಯದರ್ಶಿ ಶಾಮಣ್ಣ ಧರ್ಮಾಪುರ ಮಾತನಾಡಿ, ಬಾಲ್ಯದಿಂದಲೂ  ನಾವು ಶುಚಿಯಾಗಿರುವದರ ಜತೆಗೆ ಹೊರಗೆ  ಸಾರ್ವಜನಿಕ ಕ್ಷೇತ್ರಗಳಲ್ಲಿ   ರಸ್ತೆ ಬದಿಯಲ್ಲಿ, ನಡೆದಾಡುವ ಸಂದರ್ಭದಲ್ಲಿ, ಸ್ವಚ್ಚತೆ ಪಾಲನೆ ಹಾಗೂ  ಆಸ್ಪತ್ರೆಗಳಲ್ಲಿ ಚುಚ್ಚು ಮದ್ದು ಪಡೆಯುವಾಗ ಹೊಸ ಸಿರಿಂಜನ್ನು ಪರಿಶೀಲನೆ ಮಾಡಿ ಜಾಗ್ರತೆ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ  ರೊ. ರಾಜಶೇಖರ್, ಪ್ರೌಢಶಾಲಾ ಮುಖ್ಯ ಶಿಕ್ಚಕಿ ದೀಪ, ಶಿಕ್ಷಕ ಅಕ್ಮಲ್, ಸುಭದ್ರ, ಶ್ರೀನಿವಾಸ್ ಹಾಗೂ ಶಾಲಾ ಮಕ್ಕಳು ಇದ್ದರು.

RELATED ARTICLES
- Advertisment -
Google search engine

Most Popular