ರಾಮನಗರ: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೈವೆ ನಲ್ಲಿ ದ್ವಿಚಕ್ರ, ತ್ರಿಚಕ್ರ, ಟ್ರಾಕ್ಟರ್ ಸೇರಿದಂತೆ ಇತರ ಮಂದಗತಿಯ ವಾಹನಗಳ ನಿಷೇಧದ ಹಿನ್ನೆಲೆ ನಿಯಮ ಉಲ್ಲಂಘಿಸಿ ಎಕ್ಸ್ ಪ್ರೆಸ್ ಹೈವೆ ಗೆ ಇಳಿದ ವಾಹನಗಳಿಗೆ ದಂಡ ಹಾಕಲಾಗಿದೆ. ಒಂದೇ ದಿನ ಸುಮಾರು 137 ಪ್ರಕರಣ ನಿಯಮ ಉಲ್ಲಂಘನೆ ಅಡಿಯಲ್ಲಿ ದಾಖಲಾಗಿದ್ದು, 68500 ರೂ ದಂಡ ವಸೂಲಿ ಮಾಡಲಾಗಿದೆ . ಇನ್ನು ಒಂದು ವಾರ ಹೆದ್ದಾರಿಯಲ್ಲಿ ರಾಮನಗರ ಜಿಲ್ಲಾ ಪೊಲೀಸರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.