Wednesday, December 3, 2025
Google search engine

Homeರಾಜಕೀಯಶಾಂತಿ ಮಾಡೋಕೆ ಕೋಳಿ ಬಲಿ ಕೊಟ್ಟಿರೋದೇ ಬ್ರೇಕ್ ಫಾಸ್ಟ್ ಮೀಟಿಂಗ್: ಕೆ.ಎನ್. ರಾಜಣ್ಣ

ಶಾಂತಿ ಮಾಡೋಕೆ ಕೋಳಿ ಬಲಿ ಕೊಟ್ಟಿರೋದೇ ಬ್ರೇಕ್ ಫಾಸ್ಟ್ ಮೀಟಿಂಗ್: ಕೆ.ಎನ್. ರಾಜಣ್ಣ

ತುಮಕೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ಈ  ಬ್ರೇಕ್‌ ಫಾಸ್ಟ್‌ ಮೀಟಿಂಗ್ ಹೇಗಿದೆ ಎಂದರೆ, ಈ ಹಳ್ಳಿಗಳಲ್ಲಿ ಶಾಂತಿ ಆಗಬೇಕು ಅಂದ್ರೆ ಕುರಿ ಕೋಳಿ ಬಲಿ ಕೊಡ್ತಾರೆ. ಆ ರೀತಿಯಾಗಿ ಎರಡು ಮನೆಯಲ್ಲಿ ಆಗಿದೆ. ಇಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಅಂತ ನಾವು ಅಂದುಕೊಂಡಿದ್ದೇವೆ. ಒಂದು ವೇಳೆ ಬದಲಾವಣೆ ಇದ್ದರೆ, ಅದನ್ನು ಹೈಕಮಾಂಡ್ ಸ್ಪಷ್ಟವಾಗಿ ಹೇಳುತ್ತದೆ ಎಂದು ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಮಾತನಾಡಿ, ಸಿಎಂ ಮತ್ತು ಡಿಸಿಎಂ ನಡುವಿನ ಇತ್ತೀಚಿನ ‘ಬ್ರೇಕ್ ಫಾಸ್ಟ್ ಮೀಟಿಂಗ್’ ಬಗ್ಗೆ ಟೀಕಿಸುತ್ತಾ, ರಾಜ್ಯ ನಾಯಕತ್ವದ ಬದಲಾವಣೆ ಕುರಿತ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಸದ್ಯ ಇರುವ ರಾಜಕೀಯ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತದೆ ಎಂದಿದ್ದಾರೆ.

ಇನ್ನೂ ನಾಯಕತ್ವ ಬದಲಾವಣೆ ಕುರಿತ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಅವರು, ಈ ಬ್ರೇಕ್ ಫಾಸ್ಟ್ ಮೀಟಿಂಗ್ ಒಂದು ರೀತಿಯಲ್ಲಿ ಬೀಗತನ ಮಾಡಿದಂತೆ ಆಗಿದೆ. ಮೊದಲು ಒಂದು ಕಡೆ ಹೆಣ್ಣು ನೋಡೋಕೆ ಬರ್ತಾರೆ, ಆ ಮೇಲೆ ಗಂಡು ನೋಡೋಕೆ ಬರ್ತಾರೆ, ಆ ರೀತಿಯಾಗಿದೆ ಎಂದು ಗ್ರಾಮೀಣ ಶೈಲಿಯಲ್ಲಿ ಉದಾಹರಣೆ ನೀಡಿ ವ್ಯಂಗ್ಯವಾಡಿದ್ದಾರೆ.

ಅದಲ್ಲದೇ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ಬೆಳಗಾವಿ ಅಧಿವೇಶನದ ನಂತರ ವಿಸ್ತರಣೆಯಾಗುವ ಸಾಧ್ಯತೆ ಇದೆ. ಅನಿವಾರ್ಯವಾಗಿ ಸಿದ್ದರಾಮಯ್ಯನವರನ್ನ ಪದಚ್ಯುತಿ ಮಾಡಿದರೆ, ಆಗ ದಲಿತ ಸಿಎಂ ಪರಮೇಶ್ವರ್ ಅವರು ಆಗಬೇಕು ಎಂದು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವೇಳೆ ದೆಹಲಿಗೆ ಹೋಗಿ ಬಂದ ಶಾಸಕರ ಪ್ರಯತ್ನವೂ ಸಫಲವೂ ಆಗಿಲ್ಲ ವಿಫಲವೂ ಆಗಿಲ್ಲ ಎಂದು ಹೇಳುವ ಮೂಲಕ, ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಮಟ್ಟದ ಬದಲಾವಣೆಗಳಿಲ್ಲ ಎಂದಿದ್ದಾರೆ. ರಾಜಣ್ಣ ಅವರ ಈ ಹೇಳಿಕೆಗಳು ರಾಜ್ಯ ಕಾಂಗ್ರೆಸ್ ಮತ್ತು ನಾಯಕತ್ವದ ಬಗ್ಗೆ ಇರುವ ಗೊಂದಲಗಳಿಗೆ ತಾತ್ಕಾಲಿಕ ವಿರಾಮ ನೀಡಿದಂತಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular