Wednesday, December 3, 2025
Google search engine

Homeರಾಜ್ಯಸುದ್ದಿಜಾಲನಟ ದರ್ಶನ್ ಗೆ ಸಂಬಂಧಿಸಿದೆ ಎನ್ನಲಾದ 82 ಲಕ್ಷ ಹಣ IT ವಶಕ್ಕೆ

ನಟ ದರ್ಶನ್ ಗೆ ಸಂಬಂಧಿಸಿದೆ ಎನ್ನಲಾದ 82 ಲಕ್ಷ ಹಣ IT ವಶಕ್ಕೆ

ಬೆಂಗಳೂರು:  ರೇಣುಕಾಸ್ವಾಮಿ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದ  82 ಲಕ್ಷ  ರೂ. ಹಣವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಿ ಬೆಂಗಳೂರಿನ 57ನೇ  ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಇಂದು ನಟ ದರ್ಶನ್ ಸೇರಿ 7 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರಾಗಿದ್ದರು. 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು.

ನಟ ದರ್ಶನ್ ನಿಂದ ಪೊಲೀಸರು 82 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು. ಈ ಹಣವನ್ನು ತಮ್ಮ ವಶಕ್ಕೆ ನೀಡುವಂತೆ ಐ.ಟಿ. ಇಲಾಖೆ ಮನವಿ ಮಾಡಿತ್ತು. ಐ.ಟಿ. ಇಲಾಖೆಯ ಅರ್ಜಿಯನ್ನು ಸೆಷನ್ಸ್ ಕೋರ್ಟ್ ಪುರಸ್ಕರಿಸಿದ್ದು,  ಇದರಿಂದಾಗಿ 82 ಲಕ್ಷ ರೂಪಾಯಿ ಹಣ ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗುತ್ತದೆ ಎಂದು ಕೋರ್ಟ್ ಆದೇಶಿಸಿದೆ.  ಇನ್ನೂ ಸೆಷನ್ಸ್ ಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಿದೆ.

RELATED ARTICLES
- Advertisment -
Google search engine

Most Popular