Wednesday, December 3, 2025
Google search engine

Homeದೇಶಹಿಂದೂ ದೇವತೆಗಳ ಕುರಿತು ನಾಲಿಗೆ ಹರಿಬಿಟ್ಟ ರೇವಂತ್‌ ರೆಡ್ಡಿ

ಹಿಂದೂ ದೇವತೆಗಳ ಕುರಿತು ನಾಲಿಗೆ ಹರಿಬಿಟ್ಟ ರೇವಂತ್‌ ರೆಡ್ಡಿ

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಹು ಹಿಂದೂ ದೇವತೆಗಳ ಅಸ್ತಿತ್ವವನ್ನು ಅಪಹಾಸ್ಯ ಮಾಡಿ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೆಡ್ಡಿ, ಹಿಂದೂ ಸಂಪ್ರದಾಯದಲ್ಲಿ ಬಹು ದೇವರುಗಳಿರುವುದನ್ನು ಪ್ರಶ್ನಿಸಿದ್ದಾರೆ. ಹಿಂದೂಗಳು ಎಷ್ಟು ದೇವರುಗಳನ್ನು ನಂಬುತ್ತಾರೆ? ಮೂರು ಕೋಟಿ ಇದೆಯೇ? ಇಷ್ಟೊಂದು ಏಕೆ ಇವೆ? ಅವಿವಾಹಿತರಿಗೆ ಒಬ್ಬ ದೇವರು – ಹನುಮಾನ್, ಎರಡು ಬಾರಿ ಮದುವೆಯಾಗುವವರಿಗೆ ಇನ್ನೊಂದು ದೇವರು ಮತ್ತು ಮದ್ಯಪಾನ ಮಾಡುವವರಿಗೆ ಇನ್ನೊಂದು ದೇವರು. ಕೋಳಿ ಬಲಿಗೆ ಒಬ್ಬನಿದ್ದಾನೆ; ಬೇಳೆ ಮತ್ತು ಅನ್ನಕ್ಕೆ ಒಬ್ಬನಿದ್ದಾನೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರು ಇದ್ದಾನೆ ಎಂದು ಹೇಳುವ ಮೂಲಕ ವಿವಾದ ಎಬ್ಬಿಸಿದ್ದಯ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಸದ್ಯ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಿಪಕ್ಷಗಳು ಕಿಡಿ ಕಾರಿವೆ. ಬಿಜೆಪಿ ಮತ್ತು ಬಿಆರ್‌ಎಸ್ ಮುಖ್ಯಮಂತ್ರಿ ಹಿಂದೂ ನಂಬಿಕೆಗಳನ್ನು ಅವಮಾನಿಸಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ಬಿಜೆಪಿ ನಾಯಕ ಚಿಕ್ಕೋಟಿ ಪ್ರವೀಣ್ ಮಾತನಾಡಿ, ಕಾಂಗ್ರೆಸ್ ಮತ್ತು ರೇವಂತ್ ರೆಡ್ಡಿಗೆ ಯಾವುದೇ ನಾಚಿಕೆ ಇಲ್ಲ. ಎಲ್ಲಾ ಸಭೆಗಳಲ್ಲಿ, ಮುಸ್ಲಿಮರಿಂದಾಗಿ ಕಾಂಗ್ರೆಸ್ ಬಂದಿದೆ ಎಂದು ಹೇಳುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಮತ್ತು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಹೇಳಿದ್ದಾರೆ.

ಬಳಿಕ ಬಿಆರ್‌ಎಸ್ ನಾಯಕ ರಾಕೇಶ್ ರೆಡ್ಡಿ ಅನುಗುಲ ಮುಖ್ಯಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿ, ಇತ್ತೀಚಿನ ದಿನಗಳಲ್ಲಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡುವುದು ಎಲ್ಲರಿಗೂ ಫ್ಯಾಷನ್ ಆಗಿಬಿಟ್ಟಿದೆ ಎಂದು ಹೇಳಿ ಅವರು ತಕ್ಷಣ ಹಿಂದೂ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಿಂದೂ ದೇವರುಗಳ ಬಗ್ಗೆ ರೆಡ್ಡಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರೆಡ್ಡಿ, ದೇವರ ಫೋಟೋದೊಂದಿಗೆ ಏನನ್ನಾದರೂ ಹುಡುಕುವವರು ಭಿಕ್ಷುಕರು, ಹಿಂದೂಗಳಲ್ಲ ಎಂದು ಹೇಳಿದ್ದು, ದೇವರು ದೇವಸ್ಥಾನದಲ್ಲಿರಬೇಕು, ಮತ್ತು ಭಕ್ತಿ ಹೃದಯದಲ್ಲಿರಬೇಕು. ಅಂತಹ ಜನರು ಮಾತ್ರ ನಿಜವಾದ ಹಿಂದೂಗಳು. ಬಿಜೆಪಿ ನಾಯಕರು ರಸ್ತೆಗಳಲ್ಲಿ ದೇವರ ಫೋಟೋ ಇಟ್ಟು ಮತ ಕೇಳುತ್ತಾರೆ ಎಂದು ರೆಡ್ಡಿ ಕಳೆದ ವರ್ಷ ಅರ್ಮೂರ್‌ನಲ್ಲಿ ಹೇಳಿದಾಗ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.

RELATED ARTICLES
- Advertisment -
Google search engine

Most Popular