ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಸೋಮನಹಳ್ಳಿಯಿಂದ ಹೊಸಕೋಟೆಗೆ ತೆರಳುವ ಮುಖ್ಯ ರಸ್ತೆ ಅಭಿವೃದ್ದಿಗೆ 8 ಕೋಟಿ ರೂಪಾಯಿಗಳನ್ನ ಲೋಕೋಯೋಗಿ ಇಲಾಖೆಯಿಂದ ಮಂಜೂರು ಆಗಿದ್ದು ಅತಿ ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನೂತನ ಅರಿವು ಮತ್ತು ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ ನಿಜಗನಹಳ್ಳಿಯಿಂದ ಕೆ.ಆರ್.ನಗರಕ್ಕೆ ತೆರಳುವ ರಸ್ತೆ ಅಭಿವೃದ್ದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆ.ಆರ್.ನಗರ ತಾಲೂಕು ಕೇಂದ್ರದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕೆ 1 ಕೋಟಿ ರೂಪಾಯಿಗಳನ್ನು ತಮ್ಮ ಮನವಿಗೆ ಮೇರೆಗೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಜೂರು ಮಾಡಿದ್ದು ಇದರ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಆರಂಭಿಸಲಾಗುತ್ತೆ ಎಂದರು.
ಹೊಸಕೋಟೆ ಗ್ರಾಮಸ್ಥರು ಹಿಂದಿನಿಂದಲು ನನ್ನನ್ನು ಬೆಂಬಲಿಸಿಕೊಂಡು ಬರುತ್ತಿದ್ದು ವಾಲ್ಮಿಕಿ ಸಮುದಾಯ , ಅಂಬೇಡ್ಕರ್ ಸಮುದಾಯ ಭವನ, ಚಿಕ್ಕಮ್ಮ ದೇವಮ್ಮ, ಬೈರವೇಶ್ವರ ಸಮುದಾಯ ನಿರ್ಮಾಣಕ್ಕೆ 15 ಲಕ್ಷ ರೂ ನೀಡಲಾಗಿದ್ದು ನೂತನ ಬಸ್ ನಿಲ್ದಾಣ, ಗ್ರಾಮದ ಪರಿಮಿತಿ ಒಳಗೆ ರಸ್ತೆ ನಿರ್ಮಾಣಕ್ಕೆ ಅನುಧಾನ ಒದಗಿಸುವ ಭರವಸೆ ನೀಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಂಥಾಲಯಗಳು ಹೆಚ್ಚಾದಷ್ಠು ಶಿಕ್ಷಿತರು ಹೆಚ್ಚಾಗಲಿದ್ದು ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸರ್ಕಾರಿ ಉದ್ಯೋಗಗಳಿಗೆ ತೆರಳಲು ಸಹಕಾರಿಯಾಗುವಂತಹ ಉತ್ತಮ ಪುಸ್ತಕಗಳು ಇರಲಿದ್ದು ಅವುಗಳನ್ನು ಓದಿ ಇತರರಿಗೆ ಮಾದರಿಯಾಗುವ ಜೀವನ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ ರವಿಶಂಕರ್ ಗ್ರಾಮಗಳ ಯುವಕರು ಹಾಗೂ ಆಸಕ್ತರು ನಿತ್ಯ ನಿಗದಿತ ಅವದಿಯಲ್ಲಿ ಗ್ರಂಥಾಲಯಗಳಿಗೆ ಬೇಟಿ ನೀಡಿ ದಿನ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದಿಕೊಂಡು ಇತರರಿಗೂ ಜ್ಞಾನವನ್ನು ಹೆಚ್ಚಿಸ ಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್ ಅವರನ್ನು ಗ್ರಾ.ಪಂ.ಅಡಳಿತ ಮಂಡಳಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಹೊಸಕೋಟೆ ಗ್ರಾ.ಪಂ.ಅಧ್ಯಕ್ಷ ಚಿಬುಕಹಳ್ಳಿ ಮಹದೇವು ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯ ಚಿಕ್ಕೇಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯ ಶಂಕರ್, ಚಿಬುಕಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್, ಮಾಜಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಗಣೇಶ್, ಗ್ರಾ.ಪಂ.ಉಪಾಧ್ಯಕ್ಷ ಸುಧಾಶಂಕರಪ್ಪ, ಸದಸ್ಯರಾದ ಮಂಗಳ, ದೇವೆಂದ್ರ, ಶೋಭಾರಾಣಿ, ಕಮಲಮ್ಮ, ಕೃಷ್ಣಶೆಟ್ಟಿ, ಬಿ.ಆರ್.ನಟರಾಜು, ಪಾಪಣ್ಣ, ಗಿರಿಜಮ್ಮ, ರತ್ನಮ್ಮ, ರೇಖಾ, ಮಲ್ಲಿಕಾರ್ಜುನ, ಪುನೀತ್, ಮುಖಂಡರಾದ ಎಚ್.ಪಿ.ಶಿವಕುಮಾರ್, ಚಿಕ್ಕಕೊಪ್ಪಲು ಕೋಳಿಮನು, ಬೆಣಗನಹಳ್ಳಿ ತುಳಸಿರಾಮ್, ಯೋಗೇಶ್, ರವೀಶ್, ಚೆಲುವರಾಜ್ , ಪ್ರಶನ್ನ ಪಾಟೀಲ್ , ಸೋಮಶೇಖರಪ್ಪ, ಬಿ.ಪಿ.ರಮೇಶ್, ಕೃಷ್ಣಶೆಟ್ಟಿ, ತಾ.ಪಂ.ಇಓ ರವಿಕುಮಾರ್, ವಿ.ಎ.ಮೌನೇಶ್, ಗ್ರಾ.ಪಂ.ಪಿಡಿಓ ರಾಜೇಶ್, ಕಾರ್ಯದರ್ಶಿ ಅಶ್ವಿನಿ ಸಿಬ್ಬಂದಿಗಳಾದ ಅನಂದ್, ರಾಜು, ರವಿ, ಪ್ರಕಾಶ್, ಗ್ರಂಥಪಾಲಕ ಪ್ರಶನ್ನ ಕುಮಾರ್ ಮತ್ತಿತರರು ಹಾಜರಿದ್ದರು.



