Friday, December 12, 2025
Google search engine

Homeರಾಜ್ಯಸುದ್ದಿಜಾಲಕೊಡಗು ಜಿಲ್ಲೆಯಲ್ಲಿ ಜನಸಾಮಾನ್ಯರ ಮೇಲೆ ದಾಳಿ, ಧ್ವನಿ ಎತ್ತಬೇಕು: ಎಎಪಿ ಆಗ್ರಹ

ಕೊಡಗು ಜಿಲ್ಲೆಯಲ್ಲಿ ಜನಸಾಮಾನ್ಯರ ಮೇಲೆ ದಾಳಿ, ಧ್ವನಿ ಎತ್ತಬೇಕು: ಎಎಪಿ ಆಗ್ರಹ

ಕೊಡಗು: ಜಿಲ್ಲೆಯಲ್ಲಿ ಬಹಳ ದಿನಗಳಿಂದ ಕೋವಿ ಸಂಬಂಧಿಸಿದ ಅಪರಾಧ ಕೃತ್ಯ ನಡೀತಿದೆ, ಇದರಲ್ಲಿ ಮಹಿಳೆಯರು, ವಯೋವೃದ್ಧರು, ಮಕ್ಕಳ ಮೇಲೆ ದಾಳಿ ಆಗಿ ನೊಂದವರು ಅನೇಕರು ಇದ್ದಾರೆ. ಇತ್ತೀಚೆಗೆ ಅಮ್ಮತ್ತಿಯಲ್ಲಿ ಗುಂಡಿನ ಕಾಳಗ ನಡೆದು ಜನರಿಗೆ ಗಾಯಗಳಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರ್ಕಾರಗಳು ಸಂಪೂರ್ಣ ಜೀವ ರಕ್ಷಸಿಸುವಲ್ಲಿ ವಿಫಲವಾಗಿವೆ.

ಜಿಲ್ಲೆಯಲ್ಲಿ ಬಂದೂಕು ಸಂಬಂಧಿಸಿದ ಅಪರಾಧಗಳು ಕೆಲವು ವರ್ಷಗಳಿಂದ ಹೆಚ್ಚು ಇದೆ, ಅದರಲ್ಲಿ ಹೆಚ್ಚಿನ ಸಾವು ನೋವು ಆಗಿರುವುದು ಒಂದು ಸಮುದಾಯದವರೇ ಎಂದು ಇಲಾಖೆ ಅಂಕಿ ಅಂಶಗಳು ಹೇಳುತ್ತದೆ. ಈಗ ಇರುವ ಬಂದೂಕು ಕಾನೂನು ಅಪರಾಧ ತಡೆಗಟ್ಟಲು ವಿಫಲವಾಗಿವೆ, ಜನಸಾಮಾನ್ಯ ರಕ್ಷಣೆ ಸಾಧ್ಯವಾಗಿಲ್ಲ, ಭಯದ ವಾತಾವರಣ ಇದೆ,ನಾಗರೀಕ ಸಮಾಜ ನಿರ್ಮಾಣಕ್ಕೆ ಅಡ್ಡಿ ಆಗಿದೆ, ಅನಾಗರೀಕತೆಯ ಕಡೆ ಸಾಗಿದೆ, ಜೊತೆಗೆ ಕೊಡಗಿನ ಸಂಸ್ಕೃತಿ ವಿರುದ್ಧವಾಗಿದೆ ಕಾನೂನುನಲ್ಲಿ ಬದಲಾವಣೆ ಆಗಬೇಕಾಗಿದೆ. ಈಗ ದೆಹಲಿ ಮತ್ತು ರಾಜ್ಯದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ.
ಜನಸಾಮಾನ್ಯರ ರಕ್ಷಣೆಗೆ, ನಾಗರೀಕ ಸಮಾಜ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಬಂದೂಕು ಸಂಬಂಧಿಸಿದ ಕಾನೂನುಗಳ ಬಗ್ಗೆ, ಸೂಕ್ತ ಕ್ರಮಕ್ಕೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ.

RELATED ARTICLES
- Advertisment -
Google search engine

Most Popular