Friday, December 12, 2025
Google search engine

Homeರಾಜ್ಯಅಚ್ಚರಿ ಮೂಡಿಸಿದ ಸಿಎಂ ಸಿದ್ದರಾಮಯ್ಯ ನವರ ವಿಮಾನ ಹಾಗೂ ಹೆಲಿಕಾಪ್ಟರ್​​ ಪ್ರವಾಸದ ವೆಚ್ಚ

ಅಚ್ಚರಿ ಮೂಡಿಸಿದ ಸಿಎಂ ಸಿದ್ದರಾಮಯ್ಯ ನವರ ವಿಮಾನ ಹಾಗೂ ಹೆಲಿಕಾಪ್ಟರ್​​ ಪ್ರವಾಸದ ವೆಚ್ಚ

ಬೆಳಗಾವಿ :  ಸಿಎಂ ಸಿದ್ದರಾಮಯ್ಯ  ವಿಮಾನ ಹಾಗೂ ಹೆಲಿಕಾಪ್ಟರ್​​ ಪ್ರವಾಸದ ವೆಚ್ಚ ಅಚ್ಚರಿ ಮೂಡಿಸಿದೆ. ಹೌದು…2023ರಿಂದ 2025ರ ನವೆಂಬರ್ ವರೆಗೆ ಸಿಎಂ ಸಿದ್ದರಾಮಯ್ಯ ವಿಮಾನ ಮತ್ತು ಹೆಲಿಕಾಪ್ಟರ್​ ಪ್ರಯಾಣಕ್ಕೆ ಸರ್ಕಾರಿ ಬೊಕ್ಕಸದಿಂದ 47 ಕೋಟಿ ರೂಪಾಯಿ (47,38,24,347) ವೆಚ್ಚವಾಗಿದೆ. ಈ ಹಿಂದೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಕಾವೇರಿ ನಿವಾಸ ನವೀಕರಣದಿಂದ ಸುದ್ದಿಯಾಗಿದ್ದ ಸಿಎಂ, ಇದೀಗ ಆಗಸದಲ್ಲಿ ಓಡಾಟಕ್ಕೆ ಕೋಟ್ಯಾಂತರ ರೂ. ಸರ್ಕಾರದ ಹಣ ಖರ್ಚಾಗಿದೆ.

ಇಂದು (ಡಿಸೆಂಬರ್ 11) ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಚುಕ್ಕೆ ರಹಿತ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಬಂದಿದ್ದು, ಸಿಎಂ ಸಿದ್ದರಾಮಯ್ಯ ವಿಮಾನಯಾನಕ್ಕೆ 47 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಪರಿಷತ್​​ ಸದನದಲ್ಲಿ ಮಾಹಿತಿ ನೀಡಿದೆ. ಸಿದ್ದರಾಮಯ್ಯನವರು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹೋಗಲು ಹೆಲಿಕಾಪ್ಟರ್, ವಿಮಾನ ಬಳಕೆ ಮಾಡುತ್ತಾರೆ. ಹಾಗೇ‌ ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿದೆಡೆ ಓಡಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ 47 ಕೋಟಿ ರೂಪಾಯಿ ಖರ್ಚಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ 2023-24ರಲ್ಲಿ 12.65 ಕೋಟಿ ರೂ. ಮತ್ತು 2024-25ರ ಜನವರಿ 15 ರವರೆಗೆ 19.35 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇನ್ನೂ ಅಚ್ಚರಿ ಅಂದರೆ ಬೆಂಗಳೂರಿನಿಂದ ಕೇವಲ 1.5 ಗಂಟೆ ಪ್ರಯಾಣದಂತಹ ಮೈಸೂರಿನ ಹತ್ತಿರದ ಸ್ಥಳಗಳಿಗೂ ಸಿಎಂ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದಾರೆ.

ವಿಮಾನ ನಿಲ್ದಾಣಗಳಿರುವ ಹುಬ್ಬಳ್ಳಿ, ಕಲಬುರಗಿ, ಮೈಸೂರು, ಬೆಳಗಾವಿಯಂತಹ ಜಿಲ್ಲಾ ಪ್ರವಾಸದ ವೇಲೆ ಹೆಚ್ಚಾಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಇನ್ನು ಇತರೆ ವಿಮಾನ ನಿಲ್ದಾಣಗಳು ಇಲ್ಲದ ಜಿಲ್ಲೆಗಳಿಗೆ ತೆರಳಬೇಕಿದ್ದರೆ ವಿಶೇಷ ಹೆಲಿಕಾಪ್ಟರ್​​ ಮೂಲಕ ಹೋಗುತ್ತಾರೆ.

ಸಿಎಂ, ಡಿಸಿಎಂ ಜತೆಗೆ ಹಿರಿಯ ಸಚಿವರು ಹಾಗೂ ಅಧಿಕಾರಿಗಳು ಸರ್ಕಾರದ ಅಧಿಕೃತ ಕೆಲಸಗಳಿಗೆ ಬಳಸುವ ಹೆಲಿಕಾಪ್ಟರ್‌ ಹಾಗೂ ವಿಮಾನ ಸೇವೆಯು ದಿನದ ಬಾಡಿಗೆ ಲೆಕ್ಕದಲ್ಲಿ ದುಬಾರಿ ಎಂಬ ಕಾರಣಕ್ಕೆ ವಾರ್ಷಿಕ ಗುತ್ತಿಗೆ ಪಡೆಯಲು ನಿರ್ಧರಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ದಿನದ ಬಾಡಿಗೆ ದುಬಾರಿ ಮತ್ತು ತುರ್ತು ಸಂದರ್ಭದಲ್ಲಿ ಲಭ್ಯವಾಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ

RELATED ARTICLES
- Advertisment -
Google search engine

Most Popular