ಬಾಗಲಕೋಟ : ಬನಹಟ್ಟಿ ನಗರದ ಗಾಂಧಿ ವೃತ್ತದಲ್ಲಿ ಅಂಬೇಡ್ಕರ್ ಸೇನೆಯಿಂದ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ತಡೆಹಿಡಿದು ಪ್ರತಿಭಟನೆ ನಡೆಸಲಾಯಿತು . ಕೆಲವು ದಿನಗಳಿಂದ ಮಣಿಪುರ ರಾಜ್ಯದಲ್ಲಿ ಹಿಂಸಾತ್ಮಕ ಕೃತ್ಯ ನಡೆಯುತ್ತಿದ್ದು ಇದರಲ್ಲಿ ಮಹಿಳೆಯರನ್ನು ಬಹಳ ವಿಕೃತವಾಗಿ ನಗ್ನ ಗೊಳಿಸಿ ಮೆರವಣಿಗೆ ಮಾಡುವುದಲ್ಲದೆ ಅತ್ಯಾಚಾರ ಎಸಗುವ ಹೇಯ ಕೃತ್ಯ ನಡೆಸುತ್ತಿರುವವರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಅಲ್ಲಿನ ಸರ್ಕಾರಗಳು ವಿಫಲವಾಗುತ್ತಿವೆ ಅದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತಿದ್ದು ಇದರಲ್ಲಿ ರಾಜ್ಯ ಪಾಲರು ಮಧ್ಯಸ್ಥಿಕೆ ವಹಿಸಿ ಶಾಂತಿ ಕದಡುವ ದುಷ್ಟ ಶಕ್ತಿಗಳನ್ನು ಹಿಡಿದು ಅವರ ಮೇಲೆ ಕಠಿಣ ಕಾನೂನು ತಂದು ಗಲಭೆ ತಡೆಯಬೇಕೆಂದು ಒತ್ತಾಯಿಸಿ ರಬಕವಿ- ಬನಹಟ್ಟಿ ತಾಲ್ಲೂಕಾ ಕಂದಾಯ ಶಿರಸ್ತಿದಾರರಮೂಲಕ ರಾಜ್ಯ ಪಾಲರಿಗೆ ಮನವಿ ನೀಡಲಾಯಿತು.