Wednesday, December 17, 2025
Google search engine

Homeದೇಶ3ನೇ ಮಹಡಿಯಿಂದ ತನ್ನಮಗಳನ್ನು ತಳ್ಳಿ ಕೊಲೆ ಮಾಡಿದ ತಾಯಿ

3ನೇ ಮಹಡಿಯಿಂದ ತನ್ನಮಗಳನ್ನು ತಳ್ಳಿ ಕೊಲೆ ಮಾಡಿದ ತಾಯಿ

ಹೈದರಾಬಾದ್ : ಹೈದರಾಬಾದ್‌ನಲ್ಲಿ ಹೆತ್ತ ತಾಯಿಯೇ ಮಗಳ ಪಾಲಿಗೆ ಕಂಟಕವಾಗಿದ್ದಾಳೆ. ತಾಯಿ ತನ್ನ ಮಕ್ಕಳಿಗಾಗಿ ಎಂತಹ ತ್ಯಾಗ ಬೇಕಾದರೂ ಮಾಡುತ್ತಾಳೆ. ಆದರೆ, ಈ ಮಹಿಳೆ ಕಟ್ಟಡದ 3ನೇ ಮಹಡಿಯಿಂದ ತನ್ನ 7 ವರ್ಷದ ಮಗಳನ್ನು ತಳ್ಳಿ ಕೊಂದಿದ್ದಾಳೆ. ಅಪಾರ್ಟ್​​ಮೆಂಟ್​ ಒಂದರಲ್ಲಿ ಈ ಘಟನೆ ನಡೆದಿದೆ. ಕೆಳಗೆ ಬಿದ್ದ ಮಗು ತೀವ್ರವಾಗಿ ಗಾಯಗೊಂಡಿತ್ತು. ಆಕೆಯನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆ ಮಗು ಸಾವನ್ನಪ್ಪಿದೆ.

ರಾಚಕೊಂಡ ಪೊಲೀಸ್ ಕಮಿಷನರೇಟ್‌ನ ಮಲ್ಕಜ್‌ಗಿರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ವಸಂತಪುರಿ ಕಾಲೋನಿಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. ಮೊನಾಲಿಸಾ ಎಂಬ ಮಹಿಳೆ ತನ್ನ ಮಗಳು ಶರೋನ್ ಮೇರಿಯನ್ನು ಮೇಲಿನಿಂದ ಕೆಳಗೆ ತಳ್ಳಿದ್ದಾಳೆ. ಈ ವೇಳೆ ಆ ಮಗು ಪಕ್ಕದ ಕಟ್ಟಡದ ಮೆಟ್ಟಿಲುಗಳ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು.

ತಕ್ಷಣ ಆಕೆಯನ್ನು ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಆಕೆಯ ಜೀವ ಉಳಿಸಲು ಪ್ರಯತ್ನಿಸಿದರು. ಆದರೆ, ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಮೊನಾಲಿಸಾ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಗೆ ಕಾರಣವೇನೆಂದು ಇನ್ನೂ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಪೊಲೀಸರ ಪ್ರಕಾರ, ಮೊನಾಲಿಸಾಳ ಕುಟುಂಬವು ಕಳೆದ 20 ವರ್ಷಗಳಿಂದ ವಸಂತಪುರಿ ಕಾಲೋನಿಯಲ್ಲಿ ವಾಸಿಸುತ್ತಿದೆ. ಮೊನಾಲಿಸಾ ಅವರ ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಗಂಡ ಮನೆಯಲ್ಲಿ ಇಲ್ಲದಿದ್ದಾಗ ನಿನ್ನೆ ಸಂಜೆ ಆಕೆ ತನ್ನ ಮಗಳನ್ನು ಕೊಲೆ ಮಾಡಿದ್ದಾಳೆ.

RELATED ARTICLES
- Advertisment -
Google search engine

Most Popular