ಹೊಸೂರು: ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮುದ್ದನಹಳ್ಳಿ ಗ್ರಾಮದ ಗೀತಾ ದಿನೇಶ್ ಮತ್ತು ಉಪಾಧ್ಯಕ್ಷರಾಗಿ ಗೀತಾ ಕಾಂತರಾಜು ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗೀತಾದಿನೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗೀತಾಕಾಂತರಾಜು ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು
ಚುನಾವಣಾಧಿಕಾರಿಯಾಗಿ ಕೆ.ಅರ್.ನಗರ ಪಶುಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಕಾರ್ಯನಿರ್ವಹಿಸಿದರು ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್.ಸಿ.ಮಹಿಳೆಗೆ ನಿಗದಿಯಾಗಿತ್ತು
ಅಧ್ಯಕ್ಷರಾಗಿ ಆಯ್ಕೆಗೊಂಡು ಮಾತನಾಡಿದ ಗೀತಾ ದಿನೇಶ್, ತಮ್ಮ ಅವದಿಯಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಅದ್ಯತೆ ನೀಡುವುದರ ಜತಗೆ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಧ್ಯತೆ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕುಮಾರ್, ಮಾಜಿ ಅಧ್ಯಕ್ಷ ಮಂಜುನಾಥ್, ತಿಮ್ಮೇಗೌಡ ಜಿ ಸದಸ್ಯ ಸಿ.ಡಿ.ಪ್ರಭಾಕರ್,ಮುಖಂಡರಾದ ಸಿ.ಬಿ.ಲೋಕೇಶ್ ಚಂದ್ರಶೇಖರಯ್ಯ, ಕಾಂತರಾಜು, ಲೋಕೇಶ್, ಪರಮೇಶ, ಮಹೇಶ್, ಶಿವಯ್ಯ, ಚಿಕ್ಕಹನಸೋಗೆ ಮಂಜು ಉಪ್ಪಾರ್, ಮತ್ತಿತರು ಅಭಿನಂದಿಸಿ ವಿಜಿಯೋತ್ಸವ ಆಚರಿಸಿದರು.
ಚುನಾವಣಾ ಸಭೆಯಲ್ಲಿ ಗ್ರಾ.ಪಂ.ಸದಸ್ಯರಾದ ಸಿ.ಬಿ.ಧರ್ಮ, ಸವಿತಾ ಶ್ರೀನಿವಾಸ್, ಗೋವಿಂದೇಗೌಡ, ಗಣೇಶ್, ಶಾರದಮ್ಮ, ಪಿಡಿಓ ಯೋಗನಂದಾ, ಕಾರ್ಯದರ್ಶಿ ಸಿದ್ದರಾಜು, ಬಿಲ್ ಕಲೆಕ್ಟರ್ ನಾಗರಾಜು, ಡಿಇಓ ಮಹದೇವಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.