Wednesday, December 17, 2025
Google search engine

Homeಸ್ಥಳೀಯಆಹಾರ ದಲ್ಲಿ ವಿಷ ಮಿಶ್ರಣ ಮಾಡಿ 2 ಸ್ವಾನಗಳನ್ನು ಕೊಂದ ಪಾಪಿಗಳು

ಆಹಾರ ದಲ್ಲಿ ವಿಷ ಮಿಶ್ರಣ ಮಾಡಿ 2 ಸ್ವಾನಗಳನ್ನು ಕೊಂದ ಪಾಪಿಗಳು

ಚಾಮರಾಜನಗರ : ಇಂದಿನ ದಿನಗಳಲ್ಲಿ ಪ್ರಾಣಿಪ್ರಿಯರು ಮನೆಯ ಸಾಕು ಪ್ರಾಣಿಗಳನ್ನು ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ, ಚೆಕ್​ಅಪ್ ಎಂದು ಕಾಳಜಿ ವಹಿಸುತ್ತಾರೆ. ಹೀಗಿರುವಾಗ ಚಾಮರಾಜನಗರ  ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಪ್ರೀತಿಯಿಂದ ಸಾಕಿದ್ದ ಎರಡು ಶ್ವಾನಗಳನ್ನು ವಿಷವಿಕ್ಕಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಕಾವ್ಯ ಎಂಬ ಯುವತಿ ಜಿಮ್ಮಿ ಮತ್ತು ಪಮ್ಮಿ ಎಂಬ ಎರಡು ಶ್ವಾನಗಳನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಿಕೊಂಡಿದ್ದರು. ಕಾರ್ಯನಿಮಿತ್ತ ಕಾವ್ಯ ಎರಡು ದಿನಗಳ ಹಿಂದೆ ಮಂಗಳೂರಿಗೆ ತೆರಳಿದ್ದ ವೇಳೆ, ತಡ ರಾತ್ರಿ ಶ್ವಾನಗಳು ಸೇವಿಸುವ ಆಹಾರದಲ್ಲಿ ವಿಷ ಮಿಶ್ರಣ ಮಾಡಿ ದುಷ್ಕರ್ಮಿಗಳು ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇಂದು ಮುಂಜಾನೆ ನೆರೆಯ ಮನೆಯ ಸತೀಶ್ ಶ್ವಾನಗಳು ಮೃತಪಟ್ಟಿರುವುದನ್ನು ಗಮನಿಸಿ ಕಾವ್ಯಗೆ ಮಾಹಿತಿ ನೀಡಿದ್ದಾರೆ.

ಪ್ರೀತಿಯ ಶ್ವಾನಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಾವ್ಯ ಮಂಗಳೂರಿನಿಂದ ಪಿಜಿ ಪಾಳ್ಯಕ್ಕೆ ಆಗಮಿಸಿದ್ದು, ಶ್ವಾನಗಳನ್ನು ಕಳೆದುಕೊಂಡ ದುಃಖದಲ್ಲಿ ಅವರು ಮಮ್ಮಲ ಮರುಗಿದ್ದಾರೆ. ಈ ಘಟನೆ ತಿಳಿದ ಕೂಡಲೇ ಕಾವ್ಯ 112 ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನಗಳ ಆಹಾರದಲ್ಲಿ ವಿಷ ಪ್ರಾಶನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇದು ಉದ್ದೇಶಪೂರ್ವಕ ಕೃತ್ಯವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಕಾನೂನಿಗೆ ವಿರುದ್ಧವಾದ ಈ ಅಮಾನವೀಯ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

RELATED ARTICLES
- Advertisment -
Google search engine

Most Popular