ಹುಣಸೂರು: ಆರೋಗ್ಯವಂತ ಪುರುಷ ಅಥವಾ ಮಹಿಳೆ ತಮ್ಮ ಜೀವಿತ ಅವಧಿಯಲ್ಲಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಶರೀರ ಸಮತೋಲನವಾಗಿ ಇರುತ್ತೆ ಎಂದು ಅಪೋಲೊ ಆಸ್ಪತ್ರೆ ವೈದ್ಯ ಡಾ.ಪವನ್ ಕುಮಾರ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಬುಧವಾರ ರೋಟರಿ ಸಂಸ್ಥೆ ಹಾಗೂ ಹುಣಸೂರು ಅಪೋಲೊ ಆಸ್ಪತ್ರೆ ಹಮ್ಮಿಕೊಂಡಿದ್ದ ಸ್ವಯಂಸೇವಾ ರಕ್ತದಾನ ಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನಕ್ಕೆ ವಯಸ್ಸಿನ ಮಿತಿಯಿಲ್ಲ ಆದರೆ ಮನುಷ್ಯ ತೂಕ 55 ಕೆಜಿ ಇರಲೇಬೇಕು ಎಂದರು.
ಆರೋಗ್ಯವಂತ ವ್ಯಕ್ತಿಗಳು ದಾನ ಮಾಡುವುದರಿಂದ ಪ್ರತಿ ಹನಿ ರಕ್ತವು ಆಪತ್ತು ಕಾಲದಲ್ಲಿ ಮನುಷ್ಯನ ಜೀವ ಉಳಿಸಲಿದ್ದು, ಪ್ರತಿ ಯುವಕ, ಯುವತಿಯರು ಜೀವ ಭಯವಿಲ್ಲದೆ, ನಿಸ್ಸಂಕೋಚವಾಗಿ ರಕ್ತದಾನ ಮಾಡಿ ರಕ್ತದಾನ ಶ್ರೇಷ್ಠ ದಾನ ಎಂಬುವುದನ್ನು ತೋರಿಸಬೇಕೆಂದರು.
ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಾತನಾಡಿ, ಸ್ವಯಂ ಸೇವಾ ರಕ್ತದಾನದಿಂದ ನಮ್ಮ ರಕ್ತ ರಿಪ್ರಸ್ ತಿಳಿಯಾಗಿ ನಮ್ಮ ಆರೋಗ್ಯಕ್ಕೆ ಪುಷ್ಠಿ ಕೊಡುವುದರ ಜತೆಗೆ, ಸಮಾಜದ ಎಷ್ಟೋ ಅನಾಥ ಜೀವಗಳ ಬದುಕಿಗೆ ಸಹಕಾರಿ ಆಗಲಿದೆ ಎಂದರು.
ಸುಮಾರು ಹತ್ತು ಮಂದಿ ತಮ್ಮ ಅಮೂಲ್ಯ ಕ್ಷಣವನ್ನು ಬದಿಗೆ ಒತ್ತಿ ಸ್ವಸೇವಕರಾಗಿ ಬಂದು ರಕ್ತದಾನ ಮಾಡಿದರು.ರೋಟರಿ ಕಾರ್ಯದರ್ಶಿ ಶ್ಯಾಮಣ್ಣ ಮಾತನಾಡಿದರು, ರಕ್ತದಾನ ಕಾರ್ಯಕ್ರಮದಲ್ಲಿ ಹಿರಿಯ ರೊ.ರಾಜಶೇಖರ್ ರೋ.ಆನಂದ್ ಆರ್.ತಂಗಮರಿಯಪ್ಪನ್, ರೊ. ಸರ್ಜೆಟ್ ಲೂಯಿಸ್ ಪೆರೇರಾ,ರೊ. ಸಿದ್ದೇಶ್ವರ್, ಮೈಸೂರು ಅಪೋಲೊ ಆಸ್ಪತ್ರೆ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕ ಮಂಜು,ಶಿಕ್ಷಕ ಅಕ್ಮಲ್, ಪಜಲ್ ರೆಹಮಾನ್, ಪ್ರಸಾದ್ ಎಸ್. ಅಶ್ವಿನಿ, ಮೇಘ, ಲಕ್ಷ್ಮಿ, ಚಾಲಕ ಮನು, ಶ್ರೀನಿವಾಸ್ ಇದ್ದರು.



