Wednesday, December 17, 2025
Google search engine

Homeಸ್ಥಳೀಯಮೀಣ್ಯಂ ರಸ್ತೆಯ ಮಹದೇಶ್ವರ ದೇವಾಲಯದ ಬಳಿ ಹುಲಿ ಪ್ರತ್ಯಕ್ಷ

ಮೀಣ್ಯಂ ರಸ್ತೆಯ ಮಹದೇಶ್ವರ ದೇವಾಲಯದ ಬಳಿ ಹುಲಿ ಪ್ರತ್ಯಕ್ಷ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ರಸ್ತೆಯ ಮಹದೇಶ್ವರ ದೇವಾಲಯದ ಬಳಿ ಬೆಳ್ಳಂಬೆಳಗ್ಗೆ ಹುಲಿಯೊಂದು ರಸ್ತೆ ಸಮೀಪ ಸಂಚರಿಸಿರುವ ಘಟನೆ ನಡೆದಿದೆ.

ಮೀಣ್ಯಂ ಗ್ರಾಮದಿಂದ ರಾಮಾಪುರ ಕಡೆಗೆ ತೆರಳುತ್ತಿದ್ದ ಬಸ್‌ ಸಮೀಪದಲ್ಲೇ ಹುಲಿ ನಡೆದುಕೊಂಡು ಹೋಗಿರುವುದು ಕಂಡುಬಂದಿದ್ದು, ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಗೊಂಡರು. ಇನ್ನು ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಇದೇ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಸುಮಾರು ಐದು ತಿಂಗಳ ಹಿಂದೆ ಐದು ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಹುಲಿಯ ಚಲನವಲನ ಕಂಡುಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹುಲಿ ಮೇಲೆಯೂ ನಿಗಾ ವಹಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಗಬೇಕಿದೆ.

RELATED ARTICLES
- Advertisment -
Google search engine

Most Popular