ಬೆಳಗಾವಿ : ಕರ್ನಾಟಕ ವಿಧಾನಸಭೆಯಲ್ಲಿ ಇಂದು ದ್ವೇಷ ಭಾಷಣ ತಡೆ ವಿಧೇಯಕ ಅಂಗೀಕಾರ ಮಾಡಲಾಗಿದ್ದು, ದ್ವೇಷ ಭಾಷಣ ತಡೆಗಟ್ಟುವ ವಿಧೇಯಕವನ್ನು ಹಲವರು ವಿರೋಧ ಮಾಡಿದ್ದರೂ, ಈ ವಿರೋಧದ ನಡುವೆಯೂ ಇಂದು ಈ ದ್ವೇಷ ಭಾಷಣ ತಡೆ ಬಿಲ್ ಅಂಗೀಕಾರಗೊಂಡಿದೆ. ಬಿಜೆಪಿ ಸದಸ್ಯರ ತೀವ್ರ ವಿರೋಧ ಮತ್ತು ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ ಈ ಬಿಲ್ ಅಂಗೀಕಾರ ಮಾಡಲಾಗಿದೆ.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಬಿಲ್ ಅಂಗೀಕಾರವಾಗುತ್ತಿದ್ದಂತೆ, ಬಿಲ್ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಸಚಿವ ಭೈರತಿ ಸುರೇಶ್ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ನಡುವೆ ಏಕವಚನದಲ್ಲಿ ವಾಕ್ಸಮರ ನಡೆದಿದೆ. ಬಿಲ್ ಅಂಗೀಕಾರದ ವೇಳೆ ಬಿಜೆಪಿ ಸದಸ್ಯರ ತೀವ್ರ ಆಕ್ಷೇಪ ಅಲ್ಲದೇ ಸಚಿವ ಭೈರತಿ ಸುರೇಶ್ ಕರಾವಳಿ ಭಾಗದವರ ಬಗ್ಗೆ ಮಾತನಾಡಿದ್ದು, ಬಿಜೆಪಿ ಶಾಸಕರು ಜನರಿಗೆ ಮಾಡಿರುವ ಅಪಮಾನ ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ದ್ವೇಷ ಭಾಷಣ ತಡೆ ಬಿಲ್ ಬಗ್ಗೆ ಮತ್ತೆ ಸದನದಲ್ಲಿ ಪ್ರಶ್ನೆ ಮಾಡಿದ ಸಚಿವ ಭೈರತಿ ಸುರೇಶ್ “ಈ ಬಿಲ್‌ನಿಂದ ಯಾಕೆ ಇಷ್ಟೊಂದು ಭಯ ಪಡ್ತೀರಿ?” ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು. ಬಿಜೆಪಿ ಸದಸ್ಯರು ಬಿಲ್‌ಗೆ ವಿರೋಧ ವ್ಯಕ್ತಪಡಿಸಿ, “ಈ ಬಿಲ್‌ನಿಂದ ಪತ್ರಕರ್ತರು ನೆಮ್ಮದಿಯಾಗಿ ಇರಲಾಗದು” ಎಂದು ಆತಂಕ ವ್ಯಕ್ತಪಡಿಸಿದರು ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಬಿಲ್ ಪ್ರತಿಯನ್ನು ಹರಿದು ಬಿಸಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ದ್ವೇಷ ಭಾಷಣ ತಡೆ ವಿಧೇಯಕವು ಸಾಮಾಜಿಕ ಸಾಮರಸ್ಯ ಕಾಪಾಡುವ ಉದ್ದೇಶ ಹೊಂದಿದ್ದು, ದ್ವೇಷ ಭಾಷಣ ನೀಡುವವರಿಗೆ ಕಠಿಣ ಶಿಕ್ಷೆ ವಿಧಿಸುವ ನಿಬಂಧನೆಗಳನ್ನು ಒಳಗೊಂಡಿದೆ. ಸರ್ಕಾರ ಈ ಬಿಲ್ ಅನಿವಾರ್ಯ ಎಂದು ಹೇಳಿದ್ದರೂ, ಬಿಜೆಪಿ ಇದನ್ನು ಮಾತು ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹದ್ದು ಎಂದು ಟೀಕಿಸಿದ್ದು, ಬಿಲ್ ಅಂಗೀಕಾರದ ನಂತರ ಪರಿಷತ್‌ಗೆ ಕಳುಹಿಸಲಾಗುವುದು ಎಂದಿದ್ದಾರೆ.
ಈ ವೇಳೆ ಸದನದಲ್ಲಿ ನಡೆದ ಗದ್ದಲ ಮತ್ತು ವಾಕ್ಸಮರವು ರಾಜಕೀಯ ವಾತಾವರಣವನ್ನು ಬಿಸಿಮಾಡಿದೆ. ಕರಾವಳಿ ಭಾಗದ ಶಾಸಕರು ಸಚಿವರ ಹೇಳಿಕೆಗೆ ಕ್ಷಮೆ ಕೋರುವಂತೆ ಪಟ್ಟು ಹಿಡಿದಿದ್ದು, ಸ್ಪೀಕರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸದನದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸಿದ್ದು, ದ್ವೇಷ ಭಾಷಣ ತಡೆ ಬಿಲ್ ಅಂಗೀಕಾರದೊಂದಿಗೆ ಸರ್ಕಾರದ ಮಹತ್ವದ ಕಾನೂನು ಸುಧಾರಣೆಗೆ ಹೆಜ್ಜೆ ಇಡಲಾಗಿದೆ. ಆದರೆ ಬಿಜೆಪಿಯ ತೀವ್ರ ವಿರೋಧದಿಂದ ಬಿಲ್ ಮುಂದಿನ ಹಂತಕ್ಕೆ ಹೋಗುವುದು ಕುತೂಹಲ ಮೂಡಿಸಿದೆ ಎನ್ನಲಾಗಿದೆ.



