ಹನೂರು : ವೈಶ್ಯಂಪಾಳ್ಯ ಗ್ರಾಮದ ಜಮೀನೊಂದಕ್ಕೆ ಜಮೀನಿಗೆ ಕಾಡಾನೆಗಳು ಲಗ್ಗೆ ಇಟ್ಟಿದ್ದರ ಪರಿಣಾಮ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಫಸಲು ಹಾಗೂ ಕೃಷಿ ಪರಿಕರಗಳು ನಾಶಗೊಂಡಿರುವ ಘಟನೆ ಜರುಗಿದೆ.
ತಾಲೂಕಿನ ವೈಶಂಪಾಳ್ಯ ಗ್ರಾಮದ ರೈತ ರಾಮಸ್ವಾಮಿಗೆ ಸೇರಿದ ಜಮೀನಿಗೆ ಕಾಡಾನೆಗಳು ಲಗ್ಗೆ ಇಟ್ಟು ಜಮೀನಿನಲ್ಲಿ ಬೆಳೆದಿದ್ದ ಬಾಳೆ ಫಸಲನ್ನು ತುಳಿದು ನಾಶಗೊಳಿಸಿರುವುದಲ್ಲದೆ ಕೃಷಿ ಚಟುವಟಿಕೆಯ ಪರಿಕರಗಳನ್ನು ಜಖಂಗೊಳಿಸಿ ತಮ್ಮ ಅಟ್ಟಹಾಸವನ್ನು ಮೆರೆಯುವ ಮೂಲಕ ಲಕ್ಷಾಂತರ ರೂ ನಷ್ಟವನ್ನು ಉಂಟು ಮಾಡಿವೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ರೈತನಿಗಾಗಿರುವ ನಷ್ಟದ ಪರಿಹಾರವನ್ನು ಒದಗಿಸುವ ಮೂಲಕ ಸಂಕಷ್ಟದಿಂದ ಪಾರು ಮಾಡಬೇಕೆಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ .