Saturday, April 19, 2025
Google search engine

Homeರಾಜ್ಯಸುದ್ದಿಜಾಲಚಂದ್ರವನ ಆಶ್ರಮ:೧೨೮ನೇ ಬೆಳದಿಂಗಳ ದೀಪಾರತಿ, ಫಲಪ್ರದಾಯಿನಿ ಪಾರ್ವತಿದೇವಿಗೆ ವಿಶೇಷ ಅಲಂಕಾರ

ಚಂದ್ರವನ ಆಶ್ರಮ:೧೨೮ನೇ ಬೆಳದಿಂಗಳ ದೀಪಾರತಿ, ಫಲಪ್ರದಾಯಿನಿ ಪಾರ್ವತಿದೇವಿಗೆ ವಿಶೇಷ ಅಲಂಕಾರ

ನಾಳೆ (ಆಗಸ್ಟ್ 3 )ಡಾಕ್ಟರ್ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳವರ ಜನ್ಮದಿನೋತ್ಸವ ಕಾರ್ಯಕ್ರಮ

ಶ್ರೀರಂಗಪಟ್ಟಣ: ದಿನಾoಕ ೦೧-೦೮-೨೦೨೩ರ ಮಂಗಳವಾರದoದು ೧೨೮ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮವು ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಿತು ಹಾಗೂ ಫಲಪ್ರದಾಯಿನಿ ಪಾರ್ವತಿದೇವಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀಗಳು ಭಕ್ತರನ್ನುದ್ದೇಶಿಸಿ, ಸಕಲ ಜೀವರಾಶಿಯ ಉಪಯೋಗಕ್ಕಾಗಿ ಪ್ರಕೃತಿಯು ಮಳೆ, ನೀರು, ಬೆಳೆ, ಸೂರ್ಯ, ಚಂದ್ರ, ಎಲ್ಲವನ್ನೂ ನೀಡಿರುವ ಭಗವಂತನಿಗೆ ಸಾಮಾನ್ಯ ಮನುಷ್ಯರಾದ ನಾವು ಚಿರಋಣಿಯಾಗಿರಬೇಕು.

ದೇವರು ನಮ್ಮ ನಿಮ್ಮಂತೆ ಸ್ವಾರ್ಥಿಯಲ್ಲ, ಬದಲಾಗಿ ತನ್ನನ್ನು ನೆನಪಿಸಿಕೊಳ್ಳುವ ಆಸ್ತಿಕನಿಗೂ ತನ್ನನ್ನು ನಂಬದೇ ಇರುವ ನಾಸ್ತಿಕನಿಗೂ ಸಮಾನವಾಗಿ ಎಲ್ಲವನ್ನೂ ನೀಡುತ್ತಾನೆ. ಎಷ್ಟೋ ಸಂದರ್ಭಗಳಲ್ಲಿ ದೇವರನ್ನು ನಂಬಿದವರಿಗೆ ಕಷ್ಟ ಬರುವುದು ಸಹಜ. ಆದರೆ, ಅಂತಿಮವಾಗಿ ದೇವರು ಅವರಿಗೆ ಜಯವನ್ನು ದಯಪಾಲಿಸುತ್ತಾನೆಂದು ರಾಮಾಯಣ, ಮಹಾಭಾರತಗಳ ಕೆಲವೊಂದು ನಿದರ್ಶನಗಳ ಮೂಲಕ ತಿಳಿಸಿದರು. ಹಾಗಾಗಿ, ಕಷ್ಟಕ್ಕೆ ಹೆದರದೇ ದೇವರ ಮೇಲೆ ನಂಬಿಕೆ ಇಡುವ ಎಲ್ಲರಿಗೂ ಭಗವಂತನು ಒಳ್ಳೆಯದನ್ನು ದಯಪಾಲಿಸುತ್ತಾನೆ.

ಎಲ್ಲವನ್ನೂ ಕೊಡಮಾಡುವ ಭಗವಂತನನ್ನು ನಂಬದೇ ಧ್ಯಾನಿಸದೇ, ಅನ್ಯರನ್ನು ಹೊಗಳುವ ಸಣ್ಣತನದ ಬುದ್ಧಿ ಮನುಷ್ಯನಿಗಿದೆ. ಇಂತಹ ಸಣ್ಣತನವನ್ನು ತೊರೆದು ದೇವರನ್ನು ನಂಬಿದರೆ ಮಾತ್ರ ಮನುಷ್ಯನಿಗೆ ಮೋಕ್ಷ ದೊರಕುತ್ತದೆ. ರೋಗ-ರುಜಿನಗಳಿಂದ ಬಳಲುತ್ತಿರುವ ಇಂದಿನ ಜನಸಮುದಾಯಕ್ಕೆ ವೈದ್ಯರ ಸೇವೆ ಅಗತ್ಯವಾಗಿದ್ದು, ಪ್ರಾಣಸಂಜೀವಿನಿಯಾಗಿರುತ್ತದೆ.

ಕೊರೊನ ಸಂದರ್ಭದಲ್ಲಿ ಪ್ರಾಣವನ್ನೂ ಒತ್ತೆ ಇಟ್ಟು ಹಗಲು-ರಾತ್ರಿ ದುಡಿದ ವೈದ್ಯರುಗಳು ಒಂದು ವೇಳೆ ಮನೆಯಲ್ಲಿಯೇ ಉಳಿದುಕೊಂಡಿದ್ದರೆ ತಮ್ಮ ಸೇವೆಯನ್ನು ಸಮರ್ಪಕವಾಗಿ ನಿಭಾಯಿಸದೇ ಅನ್ಯಮನಸ್ಕರಾಗಿದ್ದರೆ ಲಕ್ಷಾಂತರ ರೋಗಿಗಳ ಪ್ರಾಣವು ಉಳಿಯುತ್ತಿರಲಿಲ್ಲ. ಈ ಕಾರಣದಿಂದ ಅವರ ಸಂಸಾರದಲ್ಲಿ ನೆಮ್ಮದಿಯು ಕಂಡುಬರುತ್ತಿರಲಿಲ್ಲ. ಇಂತಹ ವೈದ್ಯರ ಸೇವೆಯನ್ನು ದೇವರ ಸೇವೆ ಎಂದೇ ಭಾವಿಸಬೇಕು.
ಈ ಸಂದರ್ಭದಲ್ಲಿ ಮೈಸೂರಿನ ಪ್ರಲಾಕ್ಷ ಆಸ್ಪತ್ರೆಯ ಸಂಸ್ಥಾಪಕರು ಮತ್ತು ಮೂಳೆ, ಬೆನ್ನುಮೂಳೆಯ ಶಸ್ತçಚಿಕಿತ್ಸಕರಾದ ಡಾ|| ಮೋಹನ್. ಎನ್.ಎಸ್, ಮೂಳೆ ಶಸ್ತçಚಿಕಿತ್ಸಕರಾದ ಡಾ|| ಮಧುಸೂಧನ್, ಕರ್ತವ್ಯ ನಿರತ ವೈದ್ಯರಾದ ಡಾ|| ಹಿರೇಮಠರವರಿಗೆ ಗುರುರಕ್ಷೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಲಿಂಗರಾಜಪ್ಪ. ಎಲ್.ಜಿ, ಡಾ|| ಮೋಹನ್, ಟಿ.ಪಿ. ಶಿವಕುಮಾರ್, ಕೆ. ಗಂಗಣ್ಣ, ಮಹದೇವಪ್ಪರವರು ಉಪಸ್ಥಿತರಿದ್ದರು.

ನಾಳೆ (ಆಗಸ್ಟ್ 3 )ಡಾಕ್ಟರ್ ಶ್ರೀ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳವರ ಜನ್ಮದಿನೋತ್ಸವದ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದ ಚಂದ್ರಮನ ಆಶ್ರಮದಲ್ಲಿ ಬೆಳಿಗ್ಗೆ 11:30ಕ್ಕೆ ಏರ್ಪಡಿಸಲಾಗಿದ್ದು ಮಠದ ಭಕ್ತಾದಿಗಳೆಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಶ್ರೀಮಠದ ವತಿಯಿಂದ ಭಕ್ತಾದಿಗಳಿಗೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular