Saturday, December 20, 2025
Google search engine

HomeUncategorizedರಾಷ್ಟ್ರೀಯಇದು ಯುದ್ಧದ ಆರಂಭವಲ್ಲ – ಪ್ರತೀಕಾರದ ಘೋಷಣೆ : ಅಮೆರಿಕ

ಇದು ಯುದ್ಧದ ಆರಂಭವಲ್ಲ – ಪ್ರತೀಕಾರದ ಘೋಷಣೆ : ಅಮೆರಿಕ

ವಾಷಿಂಗ್ಟನ್‌ : ಐಸಿಸ್‌ ಉಗ್ರರ ದಾಳಿಯಲ್ಲಿ ಮೂವರು ಅಮೆರಿಕನ್ನರು ಸಾವನ್ನಪ್ಪಿದ ಹಿನ್ನೆಲೆ ಅಮೆರಿಕ ಪ್ರತೀಕಾರಕ್ಕೆ ಮುಂದಾಗಿದೆ. ಈ ಹಿನ್ನಲೆ ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧ ಅಮೆರಿಕದ ಪಡೆಗಳು ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಈ ಕುರಿತು ಮಾಹಿತಿ ನೀಡಿರುವ ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್, ʻಐಸಿಸ್‌ ವಿರುದ್ಧ ಆಪರೇಷನ್‌ ಹಾಕೈ ಸ್ಟ್ರೈಕ್‌ʼ ಶುರುವಾಗಿದೆ ಎಂದು ಘೋಷಿಸಿದ್ದಾರೆ.

ಇದೇ ಡಿ. 13 ರಂದು ಸಿರಿಯಾದ ಪಾಲ್ಮಿರಾದಲ್ಲಿ ದಾಳಿಗೆ ನೇರ ಪ್ರತಿಕ್ರಿಯೆಯಾಗಿ ಅಮೆರಿಕ ಕಾರ್ಯಾಚರಣೆ ನಡೆಸಿದೆ ಎಂದು ಯುಎಸ್‌ ಅಧಿಕಾರಿಗಳು ತಿಳಿಸಿದ್ದು, ಐಸಿಸ್ ಉಗ್ರರು, ಅವರ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಾಣಗಳನ್ನ ನಿರ್ಮೂಲನೆ ಮಾಡಲು, ಅಮೆರಿಕದ ಪಡೆಗಳು ಸಿರಿಯಾದಲ್ಲಿ ಆಪರೇಷನ್ ʻಹಾಕೈʼ ಆರಂಭಿಸಿವೆ ಎಂದು ಪೀಟ್ ಹೆಗ್ಸೆತ್‌ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಲ್ಲದೇ, ಇದು ಯುದ್ಧದ ಆರಂಭವಲ್ಲ – ಪ್ರತೀಕಾರದ ಘೋಷಣೆ ಅಂತ ಬರೆದುಕೊಂಡಿದ್ದಾರೆ. ಅಮೆರಿಕನ್ನರನ್ನ ಗುರಿಯಾಗಿಸಿದ್ದರೆ, ನೀವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮನ್ನ ನಾವು ಬೇಟೆಯಾಡುತ್ತೇವೆ ಅಮೆರಿಕ ನಿಮ್ಮ ಮೇಲೆ ದಾಳಿ ಮಾಡಿ ನಿಮ್ಮನ್ನು ಕೊಲ್ಲುತ್ತದೆ ಎಂಬ ಭಯದಲ್ಲೇ ನೀವು ಉಳಿದ ಜೀವನ ಕಳೆಯಬೇಕಾಗುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆವು. ಇದೀಗ ಅದೇ ರೀತಿ ಮಾಡುತ್ತೇವೆ. ಡೊನಾಲ್ಡ್‌ ಟ್ರಂಪ್‌ ಅವರ ನಾಯಕತ್ವದಲ್ಲಿ ಅಮೆರಿಕ ತಮ್ಮ ಜನರನ್ನ ರಕ್ಷಿಸಲು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಇದೇ ತಿಂಗಳಲ್ಲಿ ಅಮೆರಿಕದ ಪಡೆಗಳ ಮೇಲೆ ಐಸಿಸ್‌ ಉಗ್ರರ ಗುಂಪು ಭೀಕರ ದಾಳಿ ನಡೆಸಿತ್ತು ಈ ದಾಳಿಯಲ್ಲಿ ಇಬ್ಬರು ಅಮೆರಿಕನ್‌ ಮತ್ತು ಓರ್ವ ನಾಗರಿಕ ಭಾಷಾಂತರಕಾರ ಸಾವನ್ನಪ್ಪಿದ್ದರು. ಅಲ್ಲದೇ ಇತರ ಮೂವರು ಅಮೆರಿಕನ್ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಇದು ಈ ವರ್ಷ ಅಮೆರಿಕ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ ಹೀಗಾಗಿ ಅಮೆರಿಕ ಪ್ರತೀಕಾರಕ್ಕೆ ಮುಂದಾಗಿದೆ ಎನ್ನಲಾಗಿದೆ.

ಈ ವೇಳೆ ಆಪರೇಷನ್‌ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್‌ ಸೋಷಿಯಲ್‌ನಲ್ಲಿ ಸಂದೇಶ ಹಂಚಿಕೊಂಡಿದ್ದು, ಅಮೆರಿಕನ್ನರ ಹತ್ಯೆ ಮತ್ತು ಅಮೆರಿಕರನ್ನರ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದೇವೆ. ಅದರಂತೆ ಸಿರಿಯಾದಾದ್ಯಂತ ಐಸಿಸ್‌ ಉಗ್ರರ ಭದ್ರಕೋಟೆಗಳ ಮೇಲೆ ಅಮೆರಿಕ ದಾಳಿ ನಡೆಸುತ್ತಿದೆ. ಇದೇ ವೇಳೆ ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರಿಗೆ ತಮ್ಮ ಬೆಂಬಲ ಪುನರುಚ್ಚರಿಸಿರುವ ಟ್ರಂಪ್‌, ಅವರು ಉಗ್ರಗಾಮಿ ಗುಂಪನ್ನು ಗುರಿಯಾಗಿಸುವ ಅಮೆರಿಕದ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular