ಹುಣಸೂರು : ಮಕ್ಕಳು ಚಿಕ್ಕವರಿದ್ದಾಗ ಹೆತ್ತವ್ರು ಮೈಯೆಲ್ಲಾ ಕಣ್ಣಾಗಿರ್ಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ನಡೆಯಬಾರದ ಘಟನೆ ನಡೆದು ಹೋಗುತ್ತೆ.. ಇದಕ್ಕೆ ಹುಣಸೂರಲ್ಲಿ ನಡೆದ ಘಟನೆಯೇ ಜೀವಂತ ಸಾಕ್ಷಿ.. ಬಿಸಿ ನೀರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪಿದೆ.

ಹುಣಸೂರು ತಾಲೂಕಿನ ಜಯಗಿರಿ ಹಾಡಿಯಲ್ಲಿ ಘನಘೋರ ಘಟನೆ ನಡೆದು ಹೋಗಿದೆ. ಮಗುವಿಗೆ ಸ್ನಾನ ಮಾಡಿಸೋದಕ್ಕೆ ಅಂತಾ ತಾಯಿ ಬಿಸಿನೀರನ್ನ ಪಾತ್ರೆಯಲ್ಲಿ ತುಂಬಿಟ್ಟಿದ್ದರು. ತಣ್ಣೀರು ಬೇಕು ಅಂತಾ ತರೋದಕ್ಕೆ ಹೊರಗೆ ಹೋಗಿದ್ದಾರೆ. ಈ ವೇಳೆ ಮಗು ಪಾತ್ರೆಗೆ ಬಿದ್ದಿದ್ದು, ಅಲ್ಲೇ ಬೆಂದು ಹೋಗಿದೆ. ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ರೂ ಪ್ರಯೋಜನವಾಗಿಲ್ಲ



