Tuesday, December 23, 2025
Google search engine

Homeಸ್ಥಳೀಯಭತ್ತ, ರಾಗಿಗೆ ಪೂಜೆ ಸಲ್ಲಿಸುವ ಮೂಲಕ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ಡಿ.ರವಿಶಂಕರ್

ಭತ್ತ, ರಾಗಿಗೆ ಪೂಜೆ ಸಲ್ಲಿಸುವ ಮೂಲಕ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ಡಿ.ರವಿಶಂಕರ್

ವರದಿ : ವಿನಯ್ ದೊಡ್ಡಕೊಪ್ಪಲು


ಕೆ.ಆರ್.ನಗರ : ರೈತರ ಬಹುದಿನದ ಬೇಡಿಕೆಯಾದ ಭತ್ತ, ರಾಗಿ ಖರೀದಿ ಕೇಂದ್ರಕ್ಕೆ ಕೊನೆಗೂ ಚಾಲನೆ ದೊರೆತಿದೆ ತಾಲೂಕು ಆಡಳಿತ ಹಾಗೂ ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಹಯೋಗದೊಂದಿಗೆ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್ ಅವರು
ಭತ್ತ, ರಾಗಿಗೆ ಪೂಜೆ ಸಲ್ಲಿಸುವ ಮೂಲಕ ಖರೀದಿ ಕೇಂದ್ರ ಉದ್ಘಾಟಿಸಿ ಬಳಿಕ ರೈತರು ತಂದಿದ್ದ ಭತ್ತ, ರಾಗಿ ಚೀಲಗಳನ್ನು ತೂಕ ಹಾಕುವ ಮೂಲಕ ಖರೀದಿಗೆ ಚಾಲನೆ ನೀಡಿದರು.

ಬಳಿಕ ಶಾಸಕ.ಡಿ.ರವಿಶಂಕರ್ ಮಾತನಾಡಿ ರಾಗಿಗೆ ಕ್ವಿಂಟಲ್ ₹4889 ಹಾಗೂ ಸಾಮಾನ್ಯ ಭತ್ತಕ್ಕೆ ₹2369, ಗ್ರೇಡ್ ಎ
ಭತ್ತಕ್ಕೆ 2389 ದರ ನಿಗದಿಗೊಳಿಸಿದೆ. ಅಧಿಕಾರಿಗಳು ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಜಾಗ್ರತೆ ವಹಿಸಬೇಕು. ರೈತರು ಗುಣಮಟ್ಟದ ರಾಗಿ ಮತ್ತು ಭತ್ತ ಮಾರಾಟ ಮಾಡುವಂತೆ ಸಲಹೆ ಮಾಡಿದರು

ಕೆ.ಆರ್.ನಗರ ,ಸಾಲಿಗ್ರಾಮ, ಚುಂಚನಕಟ್ಟೆಯಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ, ರೈತರು ಗುಣಮಟ್ಟದ ಭತ್ತ ಮತ್ತು ರಾಗಿ ತನ್ನಿ ಎಂದರಲ್ಲದೆ ರೈತರ ಪರವಾದ ಕೆಲಸಗಳನ್ನು ಮಾಡುತ್ತಿದ್ದು ಇಂದು ಹತ್ತು ಹಲವು ಸಲಹೆಯನ್ನು ರೈತ ಮುಖಂಡರು ನೀಡಿದ್ದಾರೆ ಮುಂದಿನ ಬಜೆಟ್ ಅಧೀನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಮುಂದಿನ ಸಾಲಿನಿಂದ ನವೆಂಬರ್ ತಿಂಗಳಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಆರಂಭಿಸಲು‌ ಕ್ರಮ ವಹಿಸಲಾಗುವುದು, ಇವಾಗ ರಾಜ್ಯದಲ್ಲಿಯೇ ಕೆ.ಆರ್.ನಗರ ಕ್ಷೇತ್ರದಲ್ಲಿ ಮಾತ್ರ ಇಂದು ಖರೀದಿ ಕೇಂದ್ರ ಪ್ರಾರಂಭಿಸುತ್ತಿರುವುದು ಎಂದು ತಿಳಿಸಿದರು.

ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ವ್ಯವಸ್ಥಾಪಕ ಕಿರಣ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂಎಸ್ ಮಾದೇವ್, ಉದಯ ಶಂಕರ್, ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್,, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆಡಗ ನಟರಾಜ್, ಹಂಪಾಪುರ ಪ್ರಶಾಂತ್, ಹೆಬ್ಬಾಳು ನಾಗೇಂದ್ರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಬೀರ್, ಆಹಾರ ಇಲಾಖೆ ಶಿರೇಸ್ತೆದಾರ್ ಮಂಜುನಾಥ್, ಆಹಾರ ನಿರೀಕ್ಷಕರಾದ ಕುಮಾರ್, ಸುರೇಶ್, ರಾಜ್ಯ ರೈತ ಪರ್ವ ಸಂಘದ ಗೌರವಾಧ್ಯಕ್ಣ ಜೆ.ಎಂ.ಕುಮಾರ್, ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮ್ ಪ್ರಸಾದ್, ವಿವಿದ ರೈತರು ಇದ್ದರು.

.

RELATED ARTICLES
- Advertisment -
Google search engine

Most Popular