Friday, December 26, 2025
Google search engine

Homeದೇಶಮುಂಬೈಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ 'ಜನ ಗಣ ಮನ'

ಮುಂಬೈಯ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ ‘ಜನ ಗಣ ಮನ’

ಮುಂಬೈನ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಕ್ರಿಸ್‌ ಮಸ್‌ ಹಬ್ಬದ ಪ್ರಯುಕ್ತ ಕ್ರಿಸ್‌ಮಸ್ ಕೋರಲ್ ಗಾಯನ ಪ್ರಾರಂಭವಾಗುತ್ತಿದ್ದಂತೆ ಭಾರತದ ರಾಷ್ಟ್ರಗೀತೆ ಮೊದಲು ಮೊಳಗಿತು. ಮೊದಲು ದೇಶ ಎಂಬ ತತ್ವದಡಿಯಲ್ಲಿ ಜನಗಣ ಮನ ಗೀತೆಯನ್ನು ಹಾಕಲಾಯಿತು. ಇನ್ನೂ ಚರ್ಚ್ ನಲ್ಲಿ ಗಾಯಕವೃಂದವು ಭಾರತೀಯ ರಾಷ್ಟ್ರಗೀತೆಯ ನುಡಿಸುವಿಕೆಯೊಂದಿಗೆ ಕ್ರಿಸ್‌ಮಸ್ ಕರೋಲ್ ನ್ನು ಆರಂಭಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.

ಐತಿಹಾಸಿಕ ಸೇಂಟ್ ಥಾಮಸ್ ಕ್ಯಾಥೆಡ್ರಲ್‌ನಲ್ಲಿ ಈ ಪ್ರದರ್ಶನ ನಡೆದಿದ್ದು, ಅಲ್ಲಿ ವೈಲ್ಡ್ ವಾಯ್ಸಸ್ ಕಾಯಿರ್ ಇಂಡಿಯಾ ಕ್ರಿಸ್‌ಮಸ್ ಕೋರಲ್ ಸಂಜೆಯನ್ನು ಜನ ಗಣ ಮನದ ಭಾವಪೂರ್ಣ ಮತ್ತು ಶಿಷ್ಟಾಚಾರ-ಅನುಸರಣೆಯ ಪ್ರದರ್ಶನದೊಂದಿಗೆ ಪ್ರಾರಂಭಿಸಿ ನಂತರ ಸಾಂಪ್ರದಾಯಿಕ ಕರೋಲ್ ಹಾಡಿದರು.

ಛಾಯಾಗ್ರಾಹಕ ಮಾಲ್ಕಮ್ ಸ್ಟೀಫನ್ಸ್ ಹಂಚಿಕೊಂಡ ಈ ವಿಡಿಯೋ 2 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದ್ದು, ದೇಶಭಕ್ತಿ ಮತ್ತು ಹಬ್ಬದ ಮನೋಭಾವದ ಈ ಹೃದಯಸ್ಪರ್ಶಿ ಕ್ಷಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಸೈಂಟ್ ಥಾಮಸ್ ಕ್ಯಾಥಡ್ರಲ್ ಚರ್ಚ್ 300ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು. ಇದು ಮುಂಬೈ ಮಹಾನಗರದ ಅತಿ ಹಳೆಯ ಚರ್ಚ್ ಆಗಿದ್ದು, ಬ್ರಿಟಿಷರ ವಸಾಹತುಶಾಹಿ ಜೀವನದಲ್ಲಿ ನೆಲೆಕಂಡ ಮುಂಬೈ ನಗರದ ಮೊದಲ ಆಂಗ್ಲನ್ನರ ಚರ್ಚ್ ಇದಾಗಿದ್ದು, 1718ರಲ್ಲಿ ಇದನ್ನು ನಿರ್ಮಿಸಲಾಗಿದ್ದು ದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವಕ್ಕೆ ಕುರುಹಾಗಿದೆ.

RELATED ARTICLES
- Advertisment -
Google search engine

Most Popular