ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಳ್ಳಬೇಟೆ ಶಿಬಿರದಲ್ಲಿ ಗಸ್ತು ನಡೆಸುವ ಸಂದರ್ಭದಲ್ಲಿ ಕಾಡು ಪ್ರಾಣಿ ದಾಳಿ ಮಾಡಿರುವ ಘಟನೆ ಬಂಡೀಪುರ ವಲಯದ ಮರಳಳ್ಳ ಕ್ಯಾಂಪ್ ಬಳಿ ನಡೆದಿದೆ.
ಸಣ್ಣಹೈದ( 55) ಪ್ರಾಣಿ ದಾಳಿಗೆ ಬಲಿಯಾದ ವ್ಯಕ್ತಿ. ಈತ ಮರಳಳ್ಳ ಕ್ಯಾಂಪ್ ನಿಂದ ಮೂವರು ಸಿಬ್ಬಂದಿಗಳ ಜೊತೆಗೆ ಗಸ್ತು ತಿರುಗುವ ಸಂದರ್ಭದಲ್ಲಿ ಪ್ರಾಣಿ ದಾಳಿ ಮಾಡಿದೆ. ಜೊತೆಯಲ್ಲಿ ಇದ್ದವರು ಸಹ ಓಡಿ ಹೋಗಿದ್ದಾರೆ. ಮುಖಕ್ಕೆ ಪರಚಿದ ಗಾಯವಾಗಿದೆ, ಯಾವುದೇ ಭಾಗವನ್ನು ತಿಂದಿಲ್ಲ. ಇದರಿಂದಾಗಿ ಹುಲಿ, ಚಿರತೆ, ಕರಡಿ ಯಾವುದು ದಾಳಿ ಮಾಡಿದೆ ಎಂದು ಗುರ್ತಿಸಲು ಸಾಧ್ಯವಾಗಿಲ್ಲ, ಮರಣೋತ್ತರ ಪರೀಕ್ಷೆ ಬಳಿಕ ದೃಢವಾಗುತ್ತದೆ ಎಂದು ವಲಯಾರಣ್ಯಾಧಿಕಾರಿ ಮಹದೇವು ತಿಳಿಸಿದರು.
ಸದ್ಯ ಮೃತ ದೇಹವನ್ನು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ.



