Tuesday, December 30, 2025
Google search engine

Homeಕ್ರೀಡೆಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೆಟಿಂಗ್ ಸ್ಪರ್ಧೆ: ಬೆಳಗಾವಿ ಸ್ನೇಟರ್‌ಗಳಿಂದ ಅತ್ಯುತ್ತಮ ಸಾಧನೆ.

ಸ್ಕೂಲ್ ಗೇಮ್ಸ್ 2025 ರಾಜ್ಯಮಟ್ಟದ ಸ್ಪೀಡ್ ಸ್ಕೆಟಿಂಗ್ ಸ್ಪರ್ಧೆ: ಬೆಳಗಾವಿ ಸ್ನೇಟರ್‌ಗಳಿಂದ ಅತ್ಯುತ್ತಮ ಸಾಧನೆ.

ವರದಿ :ಸ್ಟೀಫನ್ ಜೇಮ್ಸ್.

ಬೆಂಗಳೂರಿನಲ್ಲಿ ನಡೆದ ‘ಸ್ಕೂಲ್ ಗೇಮ್ಸ್ 2025’ ರಾಜ್ಯಮಟ್ಟದ ಸ್ಪೀಡ್ ಸ್ಟೇಟಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಒಟ್ಟು 13 ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ರೋಲ‌ರ್ ಸ್ಕೆಟಿಂಗ್ ಅಸೋಸಿಯೇಷನ್‌ನಿಂದ ಆಯ್ಕೆಯಾದ ಈ ಸ್ಟೇಟರ್‌ಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ 300 ಕ್ಕೂ ಹೆಚ್ಚು ಪ್ರಮುಖ ಸ್ಕೆಟಿಂಗ್ ಪಟುಗಳು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆ ಬೆಳಗಾವಿಯ ಸ್ಕೆಟರ್‌ಗಳು 3 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಜಾನ್ವಿ ತೆಂಡೂಲ್ಕರ್: 2 ಚಿನ್ನದ ಪದಕಗಳು, ಆರಾಧ್ಯಾ ಪಿ.: 1 ಚಿನ್ನ ಮತ್ತು 1 ಬೆಳ್ಳಿ ಪದಕ, ರಶ್ಮಿತಾ ಅಂಬಿಗಾ: 2 ಬೆಳ್ಳಿ ಮತ್ತು 1 ಕಂಚಿನ ಪದಕ, ಶಲ್ಯ ತರಳೇಕರ್: 1 ಬೆಳ್ಳಿ ಮತ್ತು 1 ಕಂಚಿನ ಪದಕ, ಋತ್ವಿಕ್ ದುಬಾಶಿ: 1 ಬೆಳ್ಳಿ ಪದಕ, ಅವನೀಶ್ ಕಾಮನ್ನವರ್: 1 ಬೆಳ್ಳಿ ಮತ್ತು 1 ಕಂಚಿನ ಪದಕ, ಕರುಣಾ ವಾಘಲಾ: 1 ಕಂಚಿನ ಪದಕ ಪಡೆದಿದ್ದಾರೆ.

ಈ ಎಲ್ಲಾ ಕ್ರೀಡಾಪಟುಗಳು ಕೆ.ಎಲ್.ಇ ಸಂಸ್ಥೆಯ ಸ್ಕೆಟಿಂಗ್ ರಿಂಕ್ ಮತ್ತು ಗುಡ್ ಶೆಫರ್ಡ್ ಸ್ಟೇಟಿಂಗ್ ರಿಂಕ್‌ನಲ್ಲಿ ತರಬೇತುದಾರರಾದ ಸೂರ್ಯಕಾಂತ್ ಹಿಂಡಲಗೇಕ‌ರ್, ವಿಠಲ ಗಂಗಾಣೆ, ಯೋಗೇಶ್ ಕುಲಕರ್ಣಿ, ವಿಶ್ವನಾಥ ಯಳ್ಳೂರಕರ್ ಮತ್ತು ಸೋಹಮ್ ಹಿಂಡಲಗೇಕರ್‌, ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಸಾಧಕರಿಗೆ ಡಾ. ಪ್ರಭಾಕರ್ ಕೋರೆ, ಮಾಜಿ ಶಾಸಕ ಶ್ಯಾಮ್ ಘಾಟಗೆ, ರಾಜ್ ಘಾಟಗೆ, ಉಮೇಶ್ ಕಲಘಟಗಿ, ಪ್ರಸಾದ್ ತೆಂಡೂಲ್ಕ‌ರ್ ಹಾಗೂ ಕರ್ನಾಟಕ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಇಂದುಧರ್ ಸೀತಾರಾಮ್ ಅವರು ಪ್ರೋತ್ಸಾಹ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular