ಪಿರಿಯಾಪಟ್ಟಣ: ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯುವ ದೃಷ್ಟಿಯಿಂದ 108 ಆರೋಗ್ಯ ಕವಚ ಆಂಬುಲೆನ್ಸ್ ಪಿರಿಯಾಪಟ್ಟಣ ತಾಲೂಕಿನ್ಯಾದಂತ ಸುಸರ್ಜಿತಗೊಂಡಿರುತ್ತದೆ. ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಯ ಸಾಪ್ತಾಯಿಕ ರಜೆಯನ್ನು ರದ್ದುಗೊಳಿಸಲಾಗಿದೆ.
ಮುಂಜಾಗೃತ ವಾಗಿಯೇ ಎಲ್ಲಾ ಆಂಬುಲೆನ್ಸ್ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇರಿಸಲಾಗಿದೆ. ತಾಲೂಕಿನಲ್ಲಿ ಸುಮಾರು ನಾಲ್ಕು ಆಂಬುಲೆನ್ಸ್ ತಜ್ಞ ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ. ತುರ್ತುಪರಿಸ್ಥಿತಿಗಳಲ್ಲಿ 108 ಫ್ರೀ ಸಂಖ್ಯೆ ಡಯಲ್ ಮಾಡಬಹುದಾಗಿದೆ. ಸಂಸ್ಥೆಯ ಒಇ ಇಎಂಇ ಉಮೇಶ್, (ಮೋ.7259115053), ಡಿಎಂ ಪ್ರಮೋದ್, ಆರ್.ಎಂ ಯತೀಶ್, ಆರ್.ಎಂ ಜಗದೀಶ್ (ಮೋ.9886550108), ಒಇ ನಾಗರಾಜು, ಪೈಲೇಟ್ ಆಕಾಶ್, ಇಎಂಟಿ ರಾಜೇಶ್ ಇರಲಿದ್ದಾರೆ.



