ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ :ನಗರದ I C ಚರ್ಚ್ ಕಾರ್ಯಕ್ರಮದಲ್ಲಿ ಬೆಳಗಾವಿಯ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹೇಳಿದರು.ಡಿಸೇಂಬರ್ 31 ರ ವರ್ಷದ ಕೊನೆಯದಿನದಂದು ಕ್ಯಾಂಪ್ ನಲ್ಲಿರುವ IC ಚರ್ಚ್ ನಲ್ಲಿ ಪ್ರಾರ್ಥನೆ ನಡೆಯಿತು ಬೆಳಗಾವಿ ಡಯಸಿಸ್ ನ ಬಿಷಪ್ ಡೇರಿಕ್ ಫೆರ್ನಾಂಡಿಸ್ ರವರಿಂದ ದಿವ್ಯ ಬಲಿಪೂಜೆ ನಡೆಯಿತು. ನಂತರ ನೆಡೆದ ಕಮ್ಯೂನಿಟಿ ಮೀಟ್ ಕಾರ್ಯಕ್ರಮ ದಲ್ಲಿ ಮುಖ್ಯ ಅಥಿತಿಯಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಭಾಗವಹಿಸಿದ್ದರು.ಬಿಷಪ್ ಡೇರಿಕ್ ರವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಕೂಡ ಕ್ರಿಶ್ಚಿಯನ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು ಇಲ್ಲಿನ ಫಾಧರ್ ಹಾಗೂ ಶಿಕ್ಷಕರು ವಿದ್ಯಾಭ್ಯಾಸ ದ ಜೊತೆಗೆ ಸಂಸ್ಕೃತಿ ಹಾಗೂ ಜೀವನ ಕ್ರಮವನ್ನು ಕಲಿಸಿದ್ದಾರೆ ಎಂದರು. ಇದೇ ಸಂಧರ್ಭ ದಲ್ಲಿ ಬೆಳಗಾವಿ ಕ್ರೈಸ್ತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಸದಾ ಸಿದ್ಧ ಎಂದು ಹೇಳಿದರು. ಕ್ರೈಸ್ತ ಬಂಧುಗಳ ಜೊತೆ ನಾನು ಸದಾ ಇರುವುದಾಗಿ ಹೇಳಿದರು.ಬಿಷಪ್ ಡೇರಿಕ್ ಫೆರ್ನಾಂಡಿಸ್ ಮಾತನಾಡಿ ನಮ್ಮ ಕ್ರೈಸ್ತ ಮಕ್ಕಳ ಸ್ಕಾಲರ್ ಶಿಪ್ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲು ಮನವಿ ಮಾಡಿದರು ಡಾಕ್ಟರ್, ಇಂಜಿನಿಯರ್ ಕಲಿಯಲು ಬಹಳ ಫೀಜ್ ಇರುವುದರಿಂದ ಬಡ ಮಕ್ಕಳ ಪಾಲಿಗೆ ಅದು ಸಾಧ್ಯವಾಗದ ಕಾರಣ ಸರ್ಕಾರದಿಂದ ಸಹಾಯವಾದರೆ ನಮ್ಮ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ IC ಚರ್ಚ್ ನ ವಂದನಿಯ ಸ್ವಾಮಿ ಡೆನಿಸ್, ಫಾ. ವಿಜಯ್ ಡಿಸೋಜ ಸಿಸ್ಟೆರ್ ಲೂರ್ದ್ ಮೇರಿ, ಚರ್ಚ್ ನ PPC ಸದಸ್ಯರು, ಇತರರು ಉಪಸ್ಥಿತರಿದ್ದರು.



