Friday, January 2, 2026
Google search engine

Homeಸಿನಿಮಾಫ್ಯಾಮಿಲಿ ಫೋಟೋ ಹಂಚಿಕೊಂಡ ಯಶ್, ಫ್ಯಾನ್ಸ್‌ಗಳಲ್ಲಿ ಸಂಭ್ರಮ

ಫ್ಯಾಮಿಲಿ ಫೋಟೋ ಹಂಚಿಕೊಂಡ ಯಶ್, ಫ್ಯಾನ್ಸ್‌ಗಳಲ್ಲಿ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಜೊತೆ ಮುದ್ದಾದ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ತಮ್ಮ ಮಕ್ಕಳು ಹಾಗೂ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಫೋಟೋ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳಂತೂ ಹೊಸ ವರ್ಷಕ್ಕೆ ಶುಭಾಶಯ ಕೋರುವುದರ ಜೊತೆಗೆ ಹುಟ್ಟುಹಬ್ಬಕ್ಕೂ ವಿಶ್‌ ಮಾಡಿ, ಕಮೆಂಟ್ ಮಾಡುತ್ತಿದ್ದಾರೆ.

ಜನವರಿ 8ಕ್ಕೆ ಯಶ್ ಹುಟ್ಟುಹಬ್ಬ. ಅನೇಕ ವರ್ಷಗಳಿಂದ ಯಶ್‌ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿಲ್ಲ ಎಂಬ ಬೇಸರ ಅಭಿಮಾನಿಗಳಿಗಿದೆ. ಯಶ್‌ ಯಾವಾಗಲೂ`ಕೆಲಸದ ಜೊತೆ ನಿಮ್ಮ ಮುಂದೆ ಬರ್ತೀನಿ’ ಎನ್ನುತ್ತಿದ್ದರು. ಹೀಗಾಗಿ ಟಾಕ್ಸಿಕ್ ಬಿಡುಗಡೆ ಸಮೀಪದಲ್ಲಿರುವ ಕಾರಣ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸುವ ಸಾಧ್ಯತೆ ಕಂಡುಬರುತ್ತಿದೆ.

ಕಳೆದ ಎರಡು ವರ್ಷಗಳಿಂದ ಬರ್ತ್‌ಡೇ ದಿನ `ಟಾಕ್ಸಿಕ್’ ಚಿತ್ರದ ಕಾರಣಕ್ಕಾಗಿ ವಿದೇಶದಲ್ಲೇ ಇರುತ್ತಿದ್ದ ಯಶ್ ಇದೀಗ ಟಾಕ್ಸಿಕ್ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಹಾಗಾದ್ರೆ ಈ ಬಾರಿ ಹುಟ್ಟುಹಬ್ಬವನ್ನ ಬೆಂಗಳೂರಿನಲ್ಲಿ ಅವರ ಅಭಿಮಾನಿಗಳ ಜೊತೆ ಆಚರಿಸಿಕೊಳ್ತಾರಾ ಎಂಬ ಪ್ರಶ್ನೆ ಎದ್ದಿದೆ. ಕೆಲವೇ ದಿನಗಳಲ್ಲಿ ಯಶ್ ಬರ್ತ್ಡೇ ವಿಚಾರವಾಗಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಅಂದಹಾಗೆ ಟಾಕ್ಸಿಕ್ ಚಿತ್ರದ ಪ್ರಚಾರ ಕಾರ್ಯಗಳೂ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular