– ಶಂಶೀರ್ ಬುಡೋಳಿ
ಎರಡು ದಾಖಲೆಯೊಂದಿಗೆ ವಿಶ್ವದಲ್ಲೇ ಪ್ರಥಮ ಪಡೆದ ವಿದ್ಯಾರ್ಥಿನಿ
ಕಲಂನಲ್ಲಿ ಮಷಿ ಅದ್ದಿ ಕೈ ಬರಹ ಮೂಲಕ ಪವಿತ್ರ ಕುರಾನ್ ಬರೆದು ಸುದ್ದಿಯಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಪದವಿ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಸಜಿಲಾ ಬೈತಡ್ಕ ಅವರು ಇದೀಗ ಇಂಟರ್ ನ್ಯಾಶನಲ್ ಬುಕ್ ಅಫ್ ರೆಕಾರ್ಡ್ ನಲ್ಲಿ ದಾಖಲೆಯಾಗಿ ವಿಶ್ವ ಮಟ್ಟದ ಕೀರ್ತಿಯನ್ನು ಗಳಿಸಿದ್ದಾರೆ.
ಕೈ ಬರಹದಲ್ಲಿ ಮಷಿ ಅದ್ದಿ ಬರೆದ ಸಾಧನೆಯೊಂದಿಗೆ ಅತ್ಯಂತ ದೊಡ್ಡ ಕೈ ಬರಹ ಕುರಾನ್ ಎಂಬ ದಾಖಲೆಯನ್ನೂ ಪಡೆದು ಈ ವಿಭಾಗದಲ್ಲಿ ಎರಡೂ ದಾಖಲೆಗಳ ಗಳಿಸಿದ ಏಕೈಕ ವಿದ್ಯಾರ್ಥಿನಿ ಯಾಗಿ ಸಜಿಲ ಹೊರಹೊಮ್ಮಿದ್ದಾರೆ.
ಬೈತಡ್ಕ ನಿವಾಸಿಯಾದ ಇಸ್ಮಾಯಿಲ್ ಹಾಜಿ ಮತ್ತು
ಝಹ್ರಾ ಜಾಸ್ಮಿನ್ ದಂಪತಿಯ ಪುತ್ರಿಯಾದ ಈಕೆ ಗಳಿಸಿದ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಪದಕ ಮತ್ತು ಸರ್ಟಿಫಿಕೇಟ್ ನೀಡುವ ಮೂಲಕ ಈ ವಿಶ್ವ ಮಟ್ಟದ ಪ್ರತಿಭೆಯನ್ನು ಪುರಸ್ಕರಿಸಿದೆ.



