Thursday, January 8, 2026
Google search engine

Homeಸಿನಿಮಾಕನ್ನಡ ಚಿತ್ರರಂಗದ ಸೆಂಚುರಿ ಗೌಡ ಇನ್ನಿಲ್ಲ

ಕನ್ನಡ ಚಿತ್ರರಂಗದ ಸೆಂಚುರಿ ಗೌಡ ಇನ್ನಿಲ್ಲ

ಮಂಡ್ಯ: ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಗ್ರೆಗೌಡ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ನೆಲೆಸಿದ್ದ ಸಿಂಗ್ರೆಗೌಡ ತಿಥಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸೆಂಚುರಿ ಗೌಡ ಎಂದೇ ಖ್ಯಾತಿ ಪಡೆದಿದ್ದರು.

100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದ್ದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಕಳೆದ ರಾತ್ರಿ ಮೃತಪಟ್ಟಿದ್ದು ಇಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. 2015 ರಲ್ಲಿ ಬಿಡುಗಡೆಯಾಗಿದ್ದ ತಿಥಿ ಸಿನಿಮಾ ಹಲವು ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

RELATED ARTICLES
- Advertisment -
Google search engine

Most Popular