ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ
ಬುಡೋಳಿ ಸಮೀಪದ ಮಡಲ ಏನಾಜೆ ಜೋಗಿಬೆಟ್ಟು ರಸ್ತೆ ಅನೇಕ ವರ್ಷಗಳಿಂದ ತೀವ್ರವಾಗಿ ಹದಗೆಟ್ಟಿದೆ. ಈ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಪೆರಾಜೆ ಪಂಚಾಯತ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಬುಡೋಳಿ ಯೂತ್ ಫೆಡರೇಶನ್ ನ ಪ್ರತಿನಿಧಿಗಳು ಮನವಿ ಕೊಟ್ಟರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಕೊನೆಗೆ ಬುಡೋಳಿ ಯೂತ್ ಫೆಡರೇಶನ್ ನ ಯುವಕರು ದೃಢ ನಿರ್ಧಾರ ಮಾಡಿ ಜನವರಿ ನಾಲ್ಕರ ರವಿವಾರ ಬೆಳಗ್ಗೆ ಈ ರಸ್ತೆ ದುರಸ್ತಿಯನ್ನು ಶ್ರಮದಾನದ ಮೂಲಕ ಮಾಡಿ ಎಲ್ಲರ ಗಮನ ಸೆಳೆದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಅಂದಹಾಗೇ ಶ್ರಮದಾನದಲ್ಲಿ ಬುಡೋಳಿ ಯೂತ್ ಫೆಡರೇಶನ್ ನ ಪ್ರತಿನಿಧಿಗಳಾದ ಕಲಂದರ್, ಗಫೂರ್, ಮುನವ್ವರ್, ಮುಹಮ್ಮದ್ ಸತ್ತಿಕ್ಕಲ್ಲು,
ಆಸೀಫ್ ಏನಾಜೆ, ಅಶ್ರಫ್, ಆಸೀಫ್, ಹಾಫೀಲ್, ತೌಸಿ, ಹಫೀಝ್, ಇಕ್ಬಾಲ್, ಹಬೀಬ್, ಸಂಸೀರ್, ಬಾಸಿತ್ ಭಾಗಿಯಾಗಿದ್ದರು.
ಈ ಶ್ರಮದಾನದಲ್ಲಿ ಎಂಸ್ಯಾಂಡ್ ವ್ಯವಸ್ಥೆಯನ್ನು ಮುಹಮ್ಮದ್ ಮಾಡಿದ್ದರು ಹಾಗೂ ಉಪಹಾರದ ವ್ಯವಸ್ಥೆಯನ್ನು ಗಫೂರ್ ಮಾಡಿದ್ದರು.
- ಶಂಶೀರ್ ಬುಡೋಳಿ



