ಗದಗ: ಗದಗ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಹಾಗೂ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಗದಗ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಎರಡು ವರ್ಷದಿಂದ ಅತೀವೃಷ್ಠಿ-ಅನಾವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ತತ್ತರಿಸಿದ್ದಾರೆ. ಈ ವರ್ಷ ಸಮರ್ಪಕ ಮಳೆಯಿಲ್ಲದೆ ಬಿತ್ತನೆಯಾಗಿಲ್ಲ, ಬೆಳೆಯು ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನ ಬರಗಾಲ ಜಿಲ್ಲೆ ಎಂಬ ಘೋಷಣೆ ಮಾಡಬೇಕು ರೈತರ ಸಾಲಮನ್ನಾ ಮಾಡಬೇಕು,ರೈತರಿಗೆ ಬೆಳೆ ವಿಮೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಅವರಿಗೆ ಮನವಿ ಸಲ್ಲಿಸಿದರು.