ಮಂಡ್ಯ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಸ್ಪೀಡ್ ಡಿಟೆಕ್ಟರ್‌ಗಳು ಐದೇ ದಿನಕ್ಕೆ ಕೈಕೊಟ್ಟಿವೆ.
ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾದ ಪರಿಣಾಮ ವೆಹಿಕಲ್ ವೇಗ ಸೆರೆಹಿಡಿಯಲು ವಿನೂತನ ತಂತ್ರಜ್ಞಾನ ಹೊಂದಿರುವ AI ಕ್ಯಾಮೆರಾವನ್ನು ಸ್ಪೀಡ್ ಕಂಟ್ರೋಲ್ ಮಾಡಲು ಅಳವಾಡಿಸಲಾಗಿತ್ತು.
ಜುಲೈ 29ರಂದು ವೆಹಿಕಲ್ ಸ್ಪೀಡ್ ಡಿಟೆಕ್ಟರ್ ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆದರೆ ಉದ್ಘಾಟನೆಗೊಂಡ ಐದನೇ ದಿನಕ್ಕೆ ಸ್ಪೀಡ್ ಡಿಟೆಕ್ಟರ್ ಕೈ ಕೊಟ್ಟಿದೆ.
ವೆಹಿಕಲ್ ಸ್ಪೀಡ್ ಡಿಟೆಕ್ಟರ್ ಸೆರೆ ಹಿಡಿದು ಟೋಲ್ ಬಳಿ ದಂಡ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು.
ಎಡಬದಿಯ ಟ್ರ್ಯಾಕ್ ನಲ್ಲಿ 60 ಕಿ.ಮೀ ವೇಗದ ಮಿತಿ, ಮಧ್ಯದ ಟ್ರ್ಯಾಕ್ ಗೆ 80 ಕಿ.ಮೀ ವೇಗದ ಮಿತಿ, ಬಲ ಬದಿ ಟ್ರ್ಯಾಕ್ ಗೆ 100 ಕಿ.ಮೀ ವೇಗದ ಮಿತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿತ್ತು.
ವೇಗದ ಮಿತಿ ಮೀರಿದರೂ ದಂಡ ಹಾಕುವ ಕೆಲಸ ಮಾಡಲು ಮುಂದಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಸ್ಪೀಡ್ ಡಿಟೆಕ್ಟರ್ ಕೆಟ್ಟುನಿಂತಿದೆ.
ಕೆಟ್ಟು ನಿಂತ ಕ್ಯಾಮೆರಾಗಳ ಬಗ್ಗೆ ವರದಿಗೆ ಮಾಧ್ಯಮಗಳು ಮುಂದಾಗಿರುವುದಕ್ಕೆ ಸ್ಪೀಡ್ ಡಿಟೆಕ್ಟರ್ ದುರಸ್ತಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.