Monday, January 12, 2026
Google search engine

Homeದೇಶಆಪರೇಷನ್‌ ಸಿಂಧೂರದ ನಂತರ ಮತ್ತೇ ಭಾರತದೊಳಗೆ ನುಗ್ಗಿದ ಪಾಕ್ ಡ್ರೋನ್‌ ;‌ ಹೊಡೆದುರುಳಿಸಿದ ಸೇನೆ

ಆಪರೇಷನ್‌ ಸಿಂಧೂರದ ನಂತರ ಮತ್ತೇ ಭಾರತದೊಳಗೆ ನುಗ್ಗಿದ ಪಾಕ್ ಡ್ರೋನ್‌ ;‌ ಹೊಡೆದುರುಳಿಸಿದ ಸೇನೆ

ಶ್ರೀನಗರ : ಆಪರೇಷನ್‌ ಸಿಂಧೂರದ ಸಮಯದಲ್ಲಿ ಪಾಕಿಸ್ತಾನಿ ಡ್ರೋನ್‌ಗಳು ಯಾವ ರೀತಿ ಹಾರಾಟ ನಡೆಸಿದ್ದವೋ ಅದೇ ರೀತಿ ಡ್ರೋನ್‌ಗಳು ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಭಾನುವಾರ ರಾತ್ರಿ ಕಂಡುಬಂದವು ಎಂದು ವರದಿಯಾಗಿದ್ದು, ಭಾರತೀಯ ಸೇನೆ ಅವುಗಳನ್ನು ಗುಂಡು ಹಾರಿಸಿ ಕೆಡವಿ ಹಾಕಿದೆ.

ಇನ್ನೂ ಡ್ರೋನ್‌ಗಳು ಬಂದೂಕುಗಳು ಅಥವಾ ಮಾದಕ ವಸ್ತುಗಳನ್ನು ಬೀಳಿಸಿವೆಯೇ ಎಂದು ಪರಿಶೀಲಿಸಲು ಸೇನೆಯು ಪ್ರದೇಶವನ್ನು ಶೋಧಿಸುತ್ತಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಿಕ್ಕಿನಿಂದ ಬಂದ ಡ್ರೋನ್‌ ಒಂದು ಸಾಂಬಾ ಸೆಕ್ಟರ್‌ನಲ್ಲಿ ಶಸ್ತ್ರಾಸ್ತ್ರಗಳ ಸರಕನ್ನು ಬೀಳಿಸಿದೆ ಎಂದು ಸೇನೆ ತಿಳಿಸಿದೆ.

ಸಂಜೆ 6.35 ಕ್ಕೆ ರಾಜೌರಿ ಜಿಲ್ಲೆಯಲ್ಲಿ ಮತ್ತೊಂದು ಡ್ರೋನ್ ಕಾಣಿಸಿಕೊಂಡಿದ್ದು, ಭಾರತದ ಸೈನ್ಯದ ಮೆಷಿನ್ ಗನ್‌ಗಳು ಈ ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ಅಲ್ಲದೆ ಸಾಂಬಾದ ರಾಮಗಢ ಸೆಕ್ಟರ್‌ನಲ್ಲಿರುವ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಸಂಜೆ 7.15 ರ ಸುಮಾರಿಗೆ ಡ್ರೋನ್‌ನಂತಹ ವಸ್ತುವೊಂದು ಕೆಲವು ನಿಮಿಷಗಳ ಕಾಲ ಸುಳಿದಾಡಿತ್ತು. ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಅದಾದ ನಂತರ ಡ್ರೋನ್ ಹಾರಾಟ ಕಡಿಮೆಯಾಗಿತ್ತು. ನಿನ್ನೆ ಒಂದೇ ದಿನದಲ್ಲಿ ಕನಿಷ್ಠ ಐದು ಪಾಕಿಸ್ತಾನಿ ಡ್ರೋನ್ ಆಕ್ರಮಣಗಳು ವರದಿಯಾಗಿವೆ ಎನ್ನಲಾಗಿದೆ.

ಪಾಕಿಸ್ತಾನವು ಭಾರತೀಯ ಭೂಪ್ರದೇಶದ ಮೇಲೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಬೀಳಿಸಲು ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸಲು ಡ್ರೋನ್‌ಗಳನ್ನು ಬಳಸುತ್ತದೆ. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದು ಹಾಕಿತ್ತು.

RELATED ARTICLES
- Advertisment -
Google search engine

Most Popular