ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರೈತರು ಸರಬರಾಜು ಮಾಡುವ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ರೂಗಳಿಂದ ರೂಗಳಿಗೆ 8 ರೂಗಳಿಗೆ ಹೆಚ್ವಿಸುವಂತೆ ಮೂಳೆ ತಜ್ಜ ಮತ್ತು ಯುವ ಜೆಡಿಎಸ್ ಮುಖಂಡ ಸಾ.ರಾ.ಧನುಷ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆಯ ಹಾಲು ಉತ್ಪಾದಕರ ಸಹಾಕಾರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗೆಡೆ ಮಾಡಿ ನಂತರ ಮಾತನಾಡಿದ ಅವರು ಗುಣ ಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ರೈತರು ಸಹಕಾರ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಮಾತಾಡಿ, ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ಸಂಘವು ಷೇರುದಾರ ರೈತರ ಸಹಕಾರದಿಂದ 1 ಲಕ್ಷ ರೂ ಲಾಭದಲ್ಲಿದ್ದು ಮುಂದೆಯು ಇದೇ ರೀತಿ ಸಂಘದ ಏಳಿಗೆಗೆ ರೈತರು ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಉದ್ಯಮಿ ಹಳಿಯೂರು ಮಧುಚಂದ್ರ, ಮತ್ತು ಸಾ.ರಾ.ಧನುಷ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎ.ಕುಚೇಲ್, ಹೊಸೂರು ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ನವೀನ, ಎಸ್.ಟಿ.ಕೀರ್ತಿ, ಎಚ್.ಎಸ್.ಜಗದೀಶ್, ನಿರ್ದೇಶಕ ಶ್ರೀಧರ್, ಎಚ್.ಎನ್.ರಮೇಶ್, ವಿವೇಕ್, ಹಳಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ಭಾಸ್ಕರ್, ಸದಸ್ಯ ಶ್ರೀನಿವಾಸ್, ಮಾಜಿ ಸದಸ್ಯ ಜಯಣ್ಣ, ಸಂಘದ ಉಪಾಧ್ಯಕ್ಷ ಎಚ್.ಕೆ.ವಿಕ್ರಮ್ ಗೌಡ, ನಿರ್ದೇಶಕರಾದ ಎಚ್.ಬಿ.ಜಯಣ್ಣ, ಎಚ್.ಎಸ್.ಅಜಯ್, ಹಳಿಯೂರು ಡೈರಿ ಅಧ್ಯಕ್ಷ ಎಚ್.ಎಸ್.ಹರೀಶ್, ಸಂಘದ ಕಾರ್ಯದರ್ಶಿ ಎಚ್.ಪಿ.ರಾಜೇಶ್, ಹಾಲುಪರೀಕ್ಷಕ ಕೀರ್ತಿ ಮುಖಂಡರಾದ ಬಿ.ರಮೇಶ್ ಶ್ರೀರಾಮಪುರ ಪ್ರಶನ್ನ ,ಎಚ್.ಅರ್, ರಾಘವೇಂದ್ರ , ಎಚ್.ಕೆ. ದಿನೇಶ್,ದೊಡ್ಡಕೊಪ್ಪಲು ಪ್ರವೀಣ್, ಮಟನ್ ಜಮೀಲ್, ಬಿ.ಎಸ್.ನಾಗೇಶ್, ಮೂಗರಾಘು ಸೇರಿದಂತೆ ಮತ್ತಿತರರು ಹಾಜರಿದ್ದರು.



