ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಅನೇಕ ರಾಜಕೀಯ ನಾಯಕರು, ದಿಗ್ಗಜರು ಇದೇ ನನ್ನ ಕಡೆ ಚುನಾವಣೆ ಎಂದು ಘೋಷಣೆ ಮಾಡಿ ಸೋತ್ತಿದ್ದರು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ, ಅಂತಹದರಲ್ಲಿ ನಮ್ಮ ನಾಯಕಾರದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಲ್ಲ, ಎಂದು ಕುರುಬ ಸಮುದಾಯದ ತಾ.ಪಂ.ಮಾಜಿ ಅಧ್ಯಕ್ಷ ದೊಡ್ಡಕೊಪ್ಪಲು ನಾಗಣ್ಣ ಮತ್ತು ಜೆಡಿಎಸ್ ಮುಖಂಡ ಗಂಧನಹಳ್ಳಿ ಜಲೇಂದ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ಆರೋಪಕ್ಕೆ ತಿರುಗೇಟು ನೀಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರ ಸುದೀರ್ಘ ರಾಜಕೀಯ ಸೇವೆಯಿಂದಲೇ ಜನಪ್ರಿಯತೆ ಪಡೆದು ಜನಪ್ರಿಯ ಶಾಸಕರಾಗಿದ್ದು ಇದನ್ನು ಸಹಿಸದ ಕಾಂಗ್ರೆಸ್ ನ ಮುಖಂಡರು ಇಲ್ಲಸಲ್ಲದ ಅಪಾದನೆ ಮಾಡುತ್ತಿದ್ದಾರೆ, ನೀವು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರಕೆ ಬರಲು ಇಪ್ಪತ್ತು ವರ್ಷಗಳು ಬೇಕಾಗಿತ್ತು ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಟೀಕಿಸಿದರು.
ಸಮಾಜದೇವೊಬವ ಕಾರ್ಯಕ್ರಮದ ಮೂಲಕ ಕ್ಷೇತ್ರದ ಜನತೆಯ ಕುಂದು ಕೊರತೆ, ಸಮಸ್ಯೆಗಳನ್ನು ಪರಿಹರಿಸುತ್ತಾ ಕಳೆದ ಇಪ್ಪತ್ತು ವರ್ಷಗಳಿಂದ ಜನತಾ ದರ್ಶನದ ಮೂಲಕ ನೊಂದವರ, ಬಡವರ, ವಿದ್ಯಾರ್ಥಿಗಳ, ಸೇವೆ ಮಾಡುತ್ತಾ ಬಂದಿದ್ದಾರೆ, ಕೋವಿಡ್ ಸಂದರ್ಭದಲ್ಲಿ ತಮ್ಮ ಸ್ವಂತ ಆಸ್ತಿ ಅಡವಿಟ್ಟು ಕ್ಷೇತ್ರದ 80 ಸಾವಿರ ಕುಟುಂಬಕ್ಕೆ ಪಡಿತರ ಕಿಟ್ ವಿತರಣೆ ಮಾಡಿದರು, ಅಲ್ಲದೆ ಕೋವಿಡ್ ನಲ್ಲಿ ಮೃತಪಟ್ಟ 136 ಕುಟುಂಬಗಳಿಗೆ ತಲಾ 25 ಸಾವಿರ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದ್ದಾರೆ ಎಂದರು.
ಬಳಿಕ ಗಂಧನಹಳ್ಳಿ ಜಲೇಂದ್ರ ಮಾತನಾಡಿ ಶಾಸಕ.ಡಿ.ರವಿಶಂಕರ್ ಅವರು ಜನಾರ್ಶೀವಾದ ಯಾತ್ರೆ ಮೂಲಕ ಮತಯಾಚನೆಗೆ ಬಂದಾಗ ನಾನು ಶಾಸಕನಾದರೆ ಗಂಧನಹಳ್ಳಿ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದರು ಎಲ್ಲಿ ಅಭಿವೃದ್ಧಿ ಎಂದು ಪ್ರಶ್ನೆ ಮಾಡಿ ಅವರು
ಕಳೆದ ವರ್ಷ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಬಂದಾಗ ಗ್ರಾಮದೊಳಗಿನ ಎಂಎಸ್.ಐಲ್ ಮದ್ಯದ ಅಂಗಡಿ ಸ್ಥಳಾಂತರ ಮಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರಲ್ಲ ಒಂದು ವರ್ಷವೇ ಕಳೆಯಿತು, ಇನ್ನೂ ಎಂಎಸ್.ಐಲ್ ಮದ್ಯದ ಅಂಗಡಿ ಸ್ಥಳಾಂತರವಾಗಿಲ್ಲ, ಇಂದು ಶಾಲೆಗೆ ಹೋಗುವ ಮಕ್ಕಳು, ಡೈರಿಗೆ ಹಾಲು ಹಾಕಲು ಹೋಗಲು ಮಹಿಳೆಯರು ಭಯ ಪಡುತ್ತಿದ್ದಾರೆ ಇದನೆಲ್ಲ ಬಿಟ್ಟು ದಿನ ಬೆಳಾಗದರೆ ನಮ್ಮ ನಾಯಕರಾದ ಸಾ.ರಾ.ಮಹೇಶ್ ಅಣ್ಣನವರ ಬಗ್ಗೆ ಹೇಳಿಕೆ ನೀಡುವುದು ಎಷ್ಟು ಸರಿ ಎಂದರು.
ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದರೂ ಕುರುಬ ಸಮುದಾಯದ ಗ್ರಾಮಗಳು ಅಭಿವೃದ್ಧಿ ಮಾಡಲು ನಿಮ್ಮಂದ ಸಾದ್ಯವಾಗಿಲ್ಲ, ನಿಮಗೆ ಹಣ ಕೊಟ್ಟು ಮತ ಕೊಟ್ಟು ಕುರುಬರ ಗಾಮಗಳು ಯಾವುದೇ ಅಭಿವೃದ್ಧಿ ಮಾಡದಿರುವ ನಿಮ್ಮ ಶಾಸಕರ ಬಗ್ಗೆ ಕ್ಷೇತ್ರದ ಜನತೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.
ಮಂಚನಹಳ್ಳಿ ಗುರುಪ್ರಸಾದ್ ಮಾತನಾಡಿ ಮಾಜಿ ಸಚಿಚ ಸಾ.ರಾ.ಮಹೇಶ್ ಅವರ ಬಗ್ಗೆ ಮಾತನಾಡುವ ಬದಲು ಅಭಿವೃದ್ಧಿ ಕೆಲಸ ಮಾಡಿ, ಮಹೇಶ್ ಅಣ್ಣ ಶಾಶ್ವತವಾದ ಅಭಿವೃದ್ಧಿ ಕಾಮಗಾರಿ ಮಾಡಿಸಿದ್ದಾರೆ, ಕ್ಷೇತ್ರದ ಅಭಿವೃದ್ಧಿ ಮಾಡಿರುವ ಬಗ್ಗೆ ಪುಸ್ತಕವನ್ನೆ ಪ್ರಿಂಟ್ ಹಾಕಿಸಲಾಗಿದೆ ನೋಡಿ ತೆರದು ಎಂದರು.
ಅಧಿಕಾರ ಬಂದು ಮೂರು ವರ್ಷಗಳಾಯಿತು ಮಂಚನಹಳ್ಳಿ ಗ್ರಾಮಕ್ಕೆ ನಿಮ್ಮ ಕೊಡುಗೆ ಏನು ಹೇಳ ಬೇಕಲ್ಲ, ಅದು ಕ್ಷೇತ್ರದ ಜನತೆಗೆ ಗೋತ್ತಾಗಲಿ ಎಂದು ಕಾಂಗ್ರೆಸ್ ಮುಖಂಡರ ಟೀಕೆಗೆ ಪ್ರತ್ಯುತ್ತರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬ ಸಮಾಜದ ಜೆಡಿಎಸ್ ಮುಖಂಡರಾದ ಮಂಚನಹಳ್ಳಿ ಗುರು ಪ್ರಸಾದ್, ಮಧುವನಹಳ್ಳಿ ಶಿವಣ್ಣ, ಬಂಗಾರಿ, ಗಂಧನಹಳ್ಳಿ ರವೀಶ್, ಮೊದಲಾದವರು ಇದ್ದರು.



