ಉದಯ ಕೃಷ್ಣ ಜಿ ಮತ್ತು ನಿಯತಿ. ಯು ಭಟ್ ಬೆಂಗಳೂರು ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ ಪೋ ಎಂಬ ಚಿತ್ರಕಲಾ ಪ್ರದರ್ಶನವು ಜನವರಿ ೧೭ ರಿಂದ ೧೯ ರ ತನಕ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದ ಉದಯ ಕೃಷ್ಣ ಜಿ ತಿಳಿಸಿದ್ದಾರೆ.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನ ನೀಡಿದ್ರು. ಕಾರ್ಯಕ್ರಮದ ಉದ್ಘಾಟನೆಯು ಜನವರಿ ೧೭ ರಂದು ಅಪರಾಹ್ನ ೩ ಗಂಟೆಗೆ ನಡೆಯಲಿದೆ. ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ. ಜಿ ಎನ್ ಭಟ್, ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್, ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ನಡೆಸಲಿದ್ದಾರೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ಪೈಂಟಿಂಗ್ ಆರ್ಟ್ , ಡ್ರಾಯಿಂಗ್ , ಫೋಟೋಗ್ರಾಫಿ , ಮಂಡಳ ಆರ್ಟ್ , ಸ್ಟ್ರಿಂಗ್ ಆರ್ಟ್ ಗಳೆಂಬ ೫ ತರದ ಚಿತ್ರಗಳ ಬೇರೆ ಬೇರೆ ಪ್ರದರ್ಶಗಳಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ, ಕೋಟಿ ಪ್ರಸಾದ್ ಆಳ್ವ ಉಪಸ್ಥಿತರಿದ್ದರು.
- ಶಂಶೀರ್ ಬುಡೋಳಿ



