Tuesday, January 13, 2026
Google search engine

Homeರಾಜಕೀಯಬಳ್ಳಾರಿ ಗಲಾಟೆಗೆ ತಿರುಗೇಟು ನೀಡಲು ರೆಡ್ಡಿ ಬ್ರದರ್ಸ್ ಪ್ಲ್ಯಾನ್

ಬಳ್ಳಾರಿ ಗಲಾಟೆಗೆ ತಿರುಗೇಟು ನೀಡಲು ರೆಡ್ಡಿ ಬ್ರದರ್ಸ್ ಪ್ಲ್ಯಾನ್

ಬೆಂಗಳೂರು : 2012 ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೂ ಬಳ್ಳಾರಿಯ ಜನಾರ್ದನ ರೆಡ್ಡಿ ಸಹೋದರರಿಗೂ ವಿಧಾನಸಭೆಯಲ್ಲಿ ಕೋಲಾಹಲವೇ ನಡೆದಿದ್ದು, ಅಂದು ಬಳ್ಳಾರಿಗೆ ಬನ್ನಿ ಎಂದು ರೆಡ್ಡಿ ಸಹೋದರರ ಸವಾಲಿಗೆ ತೋಳು ತಟ್ಟಿದ್ದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಗಣಿ ಧನಿಗಳಾಗಿದ್ದ ರೆಡ್ಡಿ ಬ್ರದರ್ಸ್ ರಾಜಕೀಯ ಹಿನ್ನಡೆಗೂ ಇದು ಕಾರಣವಾಗಿತ್ತು.

ಆದರೆ ಇದೀಗ ಅದಕ್ಕೆ ತಿರುಗೇಟು ನೀಡಲು ರೆಡ್ಡಿ ಸಹೋದರರು ತಾಲೀಮು ನಡೆಸುತ್ತಿದ್ದು, ಬಳ್ಳಾರಿಯಲ್ಲಿ ಕಾಂಗ್ರೆಸ್‌ ಶಾಸಕ ನಾರಾ ಭರತ್‌ ರೆಡ್ಡಿ ಹಾಗೂ ಬಿಜೆಪಿ ಶಾಸಕ ಗಾಲಿ ಜನಾರ್ದನ ರಡ್ಡಿ ನಡುವಿನ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅಂಗ ರಕ್ಷಕರೊಬ್ಬ ಫೈರಿಂಗ್ ಮಾಡಿದ ಸಂದರ್ಭದಲ್ಲಿ ಗುಂಡು ತಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದು, ಬಳ್ಳಾರಿಯಲ್ಲಿ ನಡೆದ ಈ ಘಟನೆ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗಿತ್ತು.

ಈ ವೆಳೆ ನನ್ನ ಮೇಲೆ ದಾಳಿ ಮಾಡುವ ಉದ್ದೇಶದಿಂದ ಗಲಾಟೆ ಮಾಡಲಾಗಿದೆ ಎಂದು ಜನಾರ್ದನ ರೆಡ್ಡಿ ಆರೋಪ ಮಾಡಿದ್ದರು. ಈ ಗಲಾಟೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ, ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಮಾಜಿ ಶಾಸಕ ಶ್ರೀರಾಮುಲು ಅವರನ್ನು ಕೊಲ್ಲುವ ಉದ್ದೇಶದೊಂದಿಗೆ ಬ್ಯಾನರ್‌ ವಿಚಾರ ಮುಂದಿಟ್ಟುಕೊಂಡು ದಾಳಿ ಮಾಡಿದ್ದ ಎಂದು ಆರೋಪಿಸಿದ್ದರು.

ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದ. ಈಗ ಬಿಟ್ಟರೆ ಮುಂದೆ ಸಿಗುವುದಿಲ್ಲ, ಹೊಡೆಯಿರಿ ಎಂದು ದಾಳಿಗೆ ಕರೆ ಕೊಟ್ಟಿದ್ದ ಎಂದು ಆರೋಪಿಸಿದ್ದರು. ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದರು. ಇನ್ನು ರಾಜಕೀಯವಾಗಿಯೂ ಇದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಬಳ್ಳಾರಿಗೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದರು. ಡಿಕೆ ಶಿವಕುಮಾರ್ ಅವರು ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಮುಂದಿಟ್ಟುಕೊಂಡು ಪಾದಯಾತ್ರೆಗೆ ಚಿಂತನೆ ನಡೆಯುತ್ತಿದೆ.

ಜನವರಿ 17 ರಂದು ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಪಾದಯಾತ್ರೆಯ ಬಗ್ಗೆ ನಿರ್ಧಾರ ಆಗುತ್ತಾ? ಎಂಬ ಕುತೂಹಲ ಕೆರಳಿಸಿದೆ ಇನ್ನು ಬಳ್ಳಾರಿ ಗಲಾಟೆ ವಿಚಾರವಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲು ಸಿದ್ದತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶಾಸಕ ಗಾಲಿ ಜನಾರ್ದನ ರೆಡ್ಡಿ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.

ಬಳ್ಳಾರಿ ಟು ಬೆಂಗಳೂರು ಪಾದಯಾತ್ರೆ ವಿಚಾರವಾಗಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನಾಯಕರು ಬಳ್ಳಾರಿಯಿಂದ ಪಾದಯಾತ್ರೆ ಮಾಡಲಿ, ಬೇಡ ಅಂದವರು ಯಾರು? ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮಾಡಿರುವುದು ನಿರ್ದಿಷ್ಟ ಕಾರಣಕ್ಕೋಸ್ಕರ ಎಂದು ತಿರುಗೇಟು ನೀಡಿದ್ದಾರೆ.

ಪಾದಯಾತ್ರೆಯ ಕುರಿತಾಗಿ ಮಾತನಾಡಿದ ಮಾಜಿ ಶಾಸಕ ಶ್ರೀರಾಮುಲು, ಪಾದಯಾತ್ರೆಯ ಬಗ್ಗೆ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಜತೆ ಚರ್ಚೆ ಮಾಡಿದ್ದೇನೆ. ಜನವರಿ 17 ರಂದು ಬಳ್ಳಾರಿಯಲ್ಲಿ ಸಮಾವೇಶ ಮಾಡ್ತೇವೆ. ಪಾದಯಾತ್ರೆ ಮಾಡಲು ನಮ್ಮ ಪಕ್ಷ ಈವರೆಗೆ ಅನುಮತಿ ಕೊಟ್ಟಿಲ್ಲ. ಎಲ್ಲ ವಿಷಯಗಳನ್ನು ತಿಳಿದುಕೊಂಡು ತಿಳಿಸುತ್ತೇವೆ ಅಂತ ವಿಜಯೇಂದ್ರ ಹೇಳಿದ್ದಾರೆ ಎಂದರು.

ನಮ್ಮಲ್ಲಿ ಪಾದಯಾತ್ರೆ ಬಗ್ಗೆ ಯಾವುದೇ ಗೊಂದಲ ಇಲ್ಲ. ನಮ್ಮ ಭಾಗದ ಮುಖಂಡರೂ ಪಾದಯಾತ್ರೆ ಮಾಡಬೇಕು ಅಂದಿದ್ದಾರೆ. ಜನಾರ್ದನ ರೆಡ್ಡಿ ಅವರು ಪಕ್ಷದ ಜತೆ ಚರ್ಚೆ ಮಾಡಬೇಕು ಅಂದಿದ್ದಾರೆ. ಪಕ್ಷ ಏನು ಹೇಳುತ್ತೋ ನಾವು ಅದರಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular