Saturday, April 19, 2025
Google search engine

Homeಸಿನಿಮಾಅಮಿತ್ ರೈ ನಿರ್ದೇಶನದ ʼಓ ಮೈ ಗಾಡ್‌ -2ʼ ಟ್ರೇಲರ್‌ ರಿಲೀಸ್‌ : ಇದೇ...

ಅಮಿತ್ ರೈ ನಿರ್ದೇಶನದ ʼಓ ಮೈ ಗಾಡ್‌ -2ʼ ಟ್ರೇಲರ್‌ ರಿಲೀಸ್‌ : ಇದೇ ಆಗಸ್ಟ್‌ 11 ರಂದು ತೆರೆಗೆ

ಮುಂಬಯಿ: ಅಕ್ಷಯ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ʼಓ ಮೈ ಗಾಡ್‌ -2ʼ ನ ಅಧಿಕೃತ ಟ್ರೇಲರ್‌ ರಿಲೀಸ್‌ ಆಗಿದೆ.

ನಂದಿಗೆ ದೇವಲೋಕದಿಂದ ತನ್ನ ಭಕ್ತನಿಗೆ ಸಂಕಷ್ಟ ಬಂದಿದೆ. ಸಹಾಯಕ್ಕೆ ನನ್ನ ಲೋಕದಿಂದ ಯಾರಾನ್ನಾದರೂ ಅಲ್ಲಿಗೆ ಕಳುಹಿಸಿ ಎಂದು ಹೇಳುವ ಮೂಲಕ ಟ್ರೇಲರ್‌ ನ ದೃಶ್ಯ ಆರಂಭವಾಗುತ್ತದೆ.

ಪಂಕಜ್‌ ತ್ರಿಪಾಠಿ ಅವರು ತನ್ನ ಮಗ ಮಾಡಿದ ಒಂದು ತಪ್ಪಿಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಾರೆ. ಅವರ ಮಗನ ಒಂದು ತಪ್ಪು, ಶಾಲೆ ಹಾಗೂ ಸಮಾಜಕ್ಕೆ ಕೆಟ್ಟದಾಗಿ ಕಾಣುತ್ತದೆ. ಇದು ತಪ್ಪಲ್ಲ, ಇದನ್ನು ಹೋರಾಟ ಮಾಡಲು ವಕೀಲ ಹಾಗೂ ಅರ್ಜಿದಾರರಾಗಿ ತಾವೇ ಪ್ರಕರಣವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳುವ ದೃಶ್ಯವನ್ನು ತೋರಿಸಲಾಗಿದೆ. ದೇವಲೋಕದಿಂದ ಶಿವನಾಗಿ ಭೂಲೋಕಕ್ಕೆ ಬರುವ ಪಾತ್ರದಲ್ಲಿ ಅಕ್ಷಯ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ. ಹಾಸ್ಯ ಹಾಗೂ ಸಂದೇಶ ಸಾರುವ ಕೆಲ ಡೈಲಾಗ್ಸ್‌ ಗಳನ್ನು ಟ್ರೇಲರ್‌ ನಲ್ಲಿ ತೋರಿಸಲಾಗಿದೆ. ಮಗ ಮಾಡಿದ ತಪ್ಪು ಯಾವುದು ಎನ್ನುವುದನ್ನು ಕುತೂಹಲವಾಗಿಯೇ ಇಡಲಾಗಿದೆ.

ಪಂಕಾಜ್‌ ತ್ರಿಪಾಠಿ ಅವರ ಕೆಲ ಡೈಲಾಗ್ಸ್‌ ಗಳು, ಅಕ್ಷಯ್‌ ಅವರ ಹಾಸ್ಯದ ದೃಶ್ಯಗಳಿಂದ ಸಿನಿಮಾದ ಟ್ರೇಲರ್‌ ಗಮನ ಸೆಳೆಯುತ್ತದೆ. ಯಾಮಿ ಗೌತಮ್‌ ವಕೀಲೆ ಆಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಕೋರ್ಟ್‌ ರೂಮ್‌ ಡ್ರಾಮಾದೊಂದಿಗೆ ಸೋಶಿಯಲ್‌ ಎವರ್‌ ನೆಸ್‌ ಕಂಟೆಂಟ್‌ ವುಳ್ಳ ಸಿನಿಮಾ ಎನ್ನುವುದು ಟ್ರೇಲರ್‌ ನೋಡಿದಾಗ ಮನದಟ್ಟಾಗುತ್ತದೆ.

ಲೈಂಗಿಕ ಶಿಕ್ಷಣದ ಕುರಿತು ಸಾಗುವ ಕಥೆಯಾಗಿರುವುದರಿಂದ ಸಿನಿಮಾಕ್ಕೆ ಸೆನ್ಸಾರ್‌ ಬೋರ್ಡ್‌ ʼಎʼ ಸರ್ಟಿಫಿಕೇಟ್‌ ನೀಡಲಾಗಿದೆ. ಕೆಲ ಆಡಿಯೋ ( ಸಂಭಾಷಣೆ) ಗಳಿಗೆ ಬಿಪ್‌ ಹಾಕಿ ಎಂದು ಸೆನ್ಸಾರ್‌ ಬೋರ್ಡ್‌ ಚಿತ್ರತಂಡಕ್ಕೆ ಹೇಳಿದೆ. ಈ ಮೊದಲು ಸಿನಿಮಾದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್‌ ಬೋರ್ಡ್‌ ಚಿತ್ರತಂಡಕ್ಕೆ ಸೂಚನೆ ನೀಡಿತ್ತು.

RELATED ARTICLES
- Advertisment -
Google search engine

Most Popular