ಬಾಗಲಕೋಟೆ: ಬಾಗಲಕೋಟೆಯ ಗ್ರಾಮೀಣ ವೃತ್ತದ ನೂತನ ಸಿಪಿಐ ಹೆಚ್.ಆರ್.ಪಾಟೀಲ್ ವಿರುದ್ಧ ವಿವಿಧ ಸಂಘಟನೆಗಳ ವತಿಯಿಂದ ನವನಗರದ ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.
ರೈತ ಮುಖಂಡ ಯಲ್ಲಪ್ಪ ಹೆಗಡೆ ನೇತೃತ್ವದಲ್ಲಿ ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದ್ದು, ಸಿಪಿಐ ಹೆಚ್ .ಆರ್.ಪಾಟೀಲ್ ತೊಲಗಿಸಿ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸಿಪಿಐ ಹೆಚ್.ಆರ್.ಪಾಟೀಲ್ ಅವರನ್ನು ರಾಯಚೂರಿಗೆ ಬಿಜೆಪಿ ಸರ್ಕಾರ ಎತ್ತಂಗಡಿ ಮಾಡಿತ್ತು. ಈಗ ಮತ್ತೆ ಬಾಗಲಕೋಟೆ ಗ್ರಾಮೀಣ ವೃತ್ತಕ್ಕೆ ಸಿಪಿಐ ಆಗಿ ವರ್ಗಾವಣೆ ಆಗಿ ಬಂದಿದ್ದಾರೆ.
ಈ ಹಿಂದೆ ಮುಧೋಳದಲ್ಲಿ ಸರ್ಕಾರ ಕಾರ್ಖಾನೆಯ ಕಾರ್ಮಿಕರ ಹಾಗೂ ರೈತರ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ.