Tuesday, January 13, 2026
Google search engine

Homeಸ್ಥಳೀಯಕುಟುಂಬದೊಂದಿಗೆ ನಾಟಕ ವೀಕ್ಷಿಸಿದ ಪ್ರಕಾಶ್ ರಾಜ್

ಕುಟುಂಬದೊಂದಿಗೆ ನಾಟಕ ವೀಕ್ಷಿಸಿದ ಪ್ರಕಾಶ್ ರಾಜ್


ಮೈಸೂರು: ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕಲಾಮಂದಿರದಲ್ಲಿ ಪ್ರರ್ದಶನ ಕಂಡ ʻರೂಪಾಂತರʼ ನಾಟಕವನ್ನು ಪಂಚಭಾಷಾ ನಟ ಪ್ರಕಾಶ್‌ ರಾಜ್‌ ಕುಟುಂಬ ಸಮೇತರಾಗಿ ವೀಕ್ಷಿಸಿದರು.

ರೂಪಾಂತರ ನಾಟಕವು ಶಾಲಾ ರಂಗ ವಿಕಾಸ ಯೋಜನೆಯಡಿ ತಯಾರಾದ ನಾಟಕವಾಗಿದ್ದು, ಕಲಿಯುವ ಮನೆ ಶಾಲೆಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟು, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬಾದಲ್‌ ಸರ್ಕಾರ್‌ ಅವರ ನಾಟಕದ ರೂಪಾಂತರವಾಗಿದ್ದು ಸಮತೆಯ ಸಂದೇಶವನ್ನು ಸಾರುತ್ತಿದೆ.

ಸಂಜೆ ಕಲಾಮಂದಿರಕ್ಕೆ ಆಗಮಿಸಿದ ನಟ ಪ್ರಕಾಶ್‌ ರಾಜ್‌ , ಪತ್ನಿ ಪೋನಿ ವರ್ಮ ಮತ್ತು ಪುತ್ರನ ಜತೆ ಮಕ್ಕಳ ನಡುವೆ ಕುಳಿತು ನಾಟಕ ವೀಕ್ಷಿಸಿದರು.

RELATED ARTICLES
- Advertisment -
Google search engine

Most Popular