Friday, January 16, 2026
Google search engine

Homeರಾಜಕೀಯಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ : ಶಾಸಕ ಬಿ.ಆರ್.ಪಾಟೀಲ್

ಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ : ಶಾಸಕ ಬಿ.ಆರ್.ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಲಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಸಂದರ್ಭದಲ್ಲೇ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಗರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿ ಬಿಡುತ್ತಾರೆ, ಇದು ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿಬಿಡ್ತಾರೆ. ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಉಳಿಸುವುದಿಲ್ಲ. ಇದರ ಅರಿವು ಕುಮಾರಸ್ವಾಮಿಗೆ ಗೊತ್ತಿದೆಯೋ ಇಲ್ವೋ ಎಂದು ಕೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಏನೇನೋ ಕನಸು ಕಂಡಿದ್ದರು. ಆದರೆ ಅವರಿಗೆ ಭ್ರಮ ನಿರಸನ ಆಗಿದೆ. ಈಗ ನೋಡಿದರೆ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಗೆ ಪಾಪ ಕೇಂದ್ರದಲ್ಲಿ ಏನು ತೊಂದರೆ ಆಗ್ತಿದೆಯೋ, ಇಲ್ಲ ಅವರ ಮಾತು ನಡೆಯುತ್ತಿಲ್ವೋ? ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ.

ಇದೇ ವೇಳೆ ಮೈತ್ರಿಗೆ ತಿರುಗೇಟು ನೀಡಿದ ಅವರು, ಮುಂದೆ ಜೆಡಿಎಸ್ ಪಕ್ಷ ಇರುತ್ತದೆಯೋ ಇಲ್ವೋ ಎಂಬುದನ್ನು ದೇವೇಗೌಡರಿಗೇ ಕೇಳಬೇಕು. ಜೆಡಿಎಸ್ ಪಕ್ಷದ ಜನಕ ಅವರೇ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಸಂಬಂಧಗಳು ಹದಗೆಡುತ್ತಿವೆ. ಇದು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ ಎಂದಿದ್ದಾರೆ.

ಇನ್ನೂ ಅನುದಾನ ಹಂಚಿಕೆ ಒಂದು ಕಡೆಯಾದರೆ, ಹಲವು ಕಾನೂನುಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಜನಸಂಖ್ಯೆ ಕಡಿಮೆ ಇದೆ, ಉತ್ತರ ಭಾರತದಲ್ಲಿ ಜಾಸ್ತಿ ಇದೆ. ಜನಗಣತಿ ಮುಗಿದ ಮೇಲೆ ಒಂದು ಆತಂಕ ಎದುರಾಗಿದೆ. ಲೋಕಸಭಾ ಕ್ಷೇತ್ರಗಳು ಉತ್ತರ ಭಾರತಕ್ಕೆ ಹೆಚ್ಚಾಗಲಿವೆ. ಇದೊಂದು ಆತಂಕ ನಮಗೆ ಇದೆ ಎಂದರು.

ಹೀಗಾಗಿ ನಾವು ಒಂದು ಸಭೆ ಮಾಡುತ್ತಿದ್ದೇವೆ. ದಕ್ಷಿಣ ಭಾರತದ ಪ್ರತಿನಿಧಿಗಳು ಈ ಸಭೆಗೆ ಬರ್ತಾರೆ. ಈ ಸಭೆಯಲ್ಲಿ ಗಂಭೀರ ಚರ್ಚೆ ಮಾಡಲಿದ್ದೇವೆ. ದಕ್ಷಿಣ ಭಾರತಕ್ಕೆ ಅನ್ಯಾಯಕ್ಕೆ ಆಸ್ಪದ ನೀಡಬಾರದು ಎಂದು ಚರ್ಚೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular