ಮೈಸೂರು : ಬಳ್ಳಾರಿ ಬ್ಯಾನರ್ ಗಲಾಟೆ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತು. ಇದೀಗ ಈ ಬೆನ್ನಲ್ಲೇ ಮೈಸೂರಿನಲ್ಲಿ ಫ್ಲೆಕ್ಸ್ ಜಟಾಪಟಿ ಜೋರಾಗಿದ್ದು, ಕೆ.ಆರ್ ನಗರದ ಕೆಸ್ತೂರು ಕೊಪ್ಪಲಿನಲ್ಲಿ ಜೆಡಿಎಸ್ ನಾಯಕರ ಫ್ಲೆಕ್ಸ್ ತೆರವುಗೊಳಿಸಿದ ಆರೋಪ ಕೇಳಿ ಬಂದಿದೆ.
ಜೆಡಿಎಸ್ ನಾಯಕರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಾರಾ ಮಹೇಶ್ ಫ್ಲೆಕ್ಸ್ಗಳನ್ನ ತೆರವುಗೊಳಿಸಿರುವ ಕಾಂಗ್ರೆಸ್ ಕಾರ್ಯಕರ್ತರು ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ ಕೂಡ ಇದೆ.
ಕಾಂಗ್ರೆಸ್ ಶಾಸಕ ರವಿಶಂಕರ್ ಹುಟ್ಟೂರಲ್ಲಿ ಕೈ ಕಾರ್ಯಕರ್ತರು ಜೆಡಿಎಸ್ ನಾಯಕರ ಬ್ಯಾನರ್ ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದ್ದು, ಜೆಡಿಎಸ್ ನಾಯಕಾರಾದ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಾರಾ ಮಹೇಶ್ ಅವರ ಬ್ಯಾನರ್ ತೆಗದ ಕಾಂಗ್ರೆಸ್ ಕಾರ್ಯಕರ್ತರು ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪವಿದೆ.
ಅಲ್ಲದೆ ಕೆ.ಆರ್ ನಗರದ ಕೆಸ್ತೂರು ಕೊಪ್ಪಲಿನಲ್ಲಿ ನಮ್ಮ ಕಾಂಗ್ರೆಸ್ ನಾಯಕರಾದ ಶಾಸಕ ರವಿ ಅಣ್ಣಾ ಹಾಗೂ ಸ್ವಾಮಿ ಗೌಡ್ರು ಫ್ಲೆಕ್ಸ್ ಮಾತ್ರ ಇರಬೇಕು. ಬೇರೆಯವರ ಫ್ಲೆಕ್ಸ್ ಅಥವಾ ಬ್ಯಾನರ್ ಹಾಕಿದ್ರೆ ಅಷ್ಟೇ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ಬಳ್ಳಾರಿ ಬ್ಯಾನರ್ ಗಲಾಟೆ ಬಳಿಕ ಮೈಸೂರಿನ ಫ್ಲೆಕ್ಸ್ ಕಿತ್ತಾಟ ಜೋರಾಗಿದೆ. ಈ ವಿಚಾರವಾಗಿ ಪೊಲೀಸರು ಯಾವ ರೀತಿ ಕ್ರಮ ತೆಗೆದುಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ ಎನ್ನಲಾಗಿದೆ.



