Sunday, January 18, 2026
Google search engine

Homeಸ್ಥಳೀಯಅಬ್ದುಲ್ ನಜೀರ್ ಸಾಬ್ ಜನ್ಮ ಜಯಂತಿಗೆ ಗಣ್ಯರ ಗೌರವ ನುಡಿ

ಅಬ್ದುಲ್ ನಜೀರ್ ಸಾಬ್ ಜನ್ಮ ಜಯಂತಿಗೆ ಗಣ್ಯರ ಗೌರವ ನುಡಿ

ವರದಿ ಎಡತೊರೆ ಮಹೇಶ್


ಗುಂಡ್ಲುಪೇಟೆ : ಅಧಿಕಾರ ವಿಕೇಂದ್ರೀಕರಣ ಜತೆಗೆ ಕಷ್ಟದ ದಿನಗಳಲ್ಲಿ ರಾಜ್ಯದ ಜನರಿಗೆ ಬೋರ್ ವೆಲ್ ಮೂಲಕ ನೀರು ಒದಗಿಸಿದ ಅಬ್ದುಲ್ ನಜೀರ್‌ಸಾಬ್ ಸ್ಮರಣೀಯರು ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಭವನದಲ್ಲಿ ಅಬ್ದುಲ್‌ನಜೀರ್ ಸಾಬ್ ಫೌಂಡೇಷನ್, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಮಿತಿ ವತಿಯಿಂದ ಅಬ್ದುಲ್‌ನಜೀರ್‌ಸಾಬ್ ಜನ್ಮ ಜಯಂತಿ ಮತ್ತು ಸ್ವಾಭಿಮಾನಿ ಪಂಚಾಯಿತ್ ಕಾರ್ಯಕರ್ತರಿಗೆ ಅಭಿನಂದನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಅಧಿಕಾರ ವಿಕೇಂದ್ರೀಕರಣದ ಶ್ರೀಸಾಮಾನ್ಯನಿಗೂ ಅಧಿಕಾರ ಸಿಗುವಂತೆ ಮಾಡಿದರು. ಇಡೀ ರಾಜ್ಯಕ್ಕೆ ಅಂತರ್ಜಲ ಬಳಸಿ ಕುಡಿವ ನೀರು ಕೊಡುವ ಮೂಲಕ ಮಾದರಿಯಾದರು. ಈ ಎರಡು ಕಾರ್ಯಗಳ ಕಾರಣ ಅಬ್ದುಲ್‌ನಜೀರ್ ಸಾಬ್ ರ ಹೆಸರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದರು.

ನಾನು ಶಾಸಕನಾದ ಮೊದಲಿಗೆ ವಿಕೇಂದ್ರೀಕರಣ ವ್ಯವಸ್ಥೆಯ ಭಾಗವಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಅಧಿಕಾರ ವಹಿಸಿಕೊಡುವ ಅವಕಾಶ ಬರುತ್ತಿದೆ. ಮುಂದೆ ಬೀದಿದೀಪ, ಚರಂಡಿ ಇತರೆ ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.

ಅಬ್ದುಲ್ ನಜೀರ್ ಸಾಬ್, ಕೆ.ಎಸ್.ನಾಗರತ್ನಮ್ಮ ನಂತರದಲ್ಲಿ ಎಚ್.ಎಸ್.ಮಹದೇವಪ್ರಸಾದ್ ರಾಜಕೀಯ ಅಧಿಕಾರ ಬಳಸಿಕೊಂಡು ಮಾಡಿದ ಸೇವೆ ಸ್ಮರಣೀಯ. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣಹೆಗಡೆಯವರು ಆಸ್ಪತ್ರೆಯಲ್ಲಿದ್ದ ಏನು ಸಹಾಯ ಬೇಕೆಂದು ಕೇಳಿದಾಗ ಬಡವರ ವಸತಿ ಯೋಜನೆ ಅನುದಾನ ಕೊಡಿ ಎಂದು ಕೇಳಿದ ಪುಣ್ಯಾತ್ಮರು ಅಬ್ದುಲ್‌ನಜೀರ್ ಸಾಬ್ ಎಂದು ಸ್ಮರಿಸಿದರು.

ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಸಿಕ್ಕ ಆಡಳಿತದ ಅನುಭವ ನಾನು ಶಾಸಕನಾಗಲು ವೇದಿಕೆಯಾಯಿತು. ಆದರೆ ಶಾಸಕ, ಮಂತ್ರಿಯಾದರೂ ಗ್ರಾಮ ಮಟ್ಟದಲ್ಲಿ ಸ್ಪಂದಿಸುವ ಕೆಲಸ ಆಗಲ್ಲ. ಇದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇರುವ ಅಧಿಕಾರದ ವ್ಯಾಪ್ತಿ ತಿಳಿದಾಗ ಇನ್ನೂ ಖುಷಿಯಾಗುತ್ತದೆ.

ಇಂತಹ ಅವಕಾಶ ಮಾಡಿದ ಅಬ್ದುಲ್ ನಜೀರ್ ಸಾಬ್ ರನ್ನು ಸ್ಮರಣೆ ಅವರ ಸ್ವಂತ ನೆಲದಲ್ಲಿ ಆಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಚುನಾವಣೆ ನಡೆಯುವ ತನಕ ಇರುವ ಸದಸ್ಯರನ್ನೇ ಮುಂದುವರೆಸ ಬೇಕು ಎಂಬ ಬೇಡಿಕೆಯನ್ನು ವಿಪಕ್ಷ ನಾಯಕರ ಮೂಲಕ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಡಿ.ಉಲ್ಲಾಸ್ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದರು
ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಮೈಸೂರು ವಿಭಾಗದ ಅಧ್ಯಕ್ಷ ಯದುನಾಳ್‌ನಾಗರಾಜು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ಪ್ರಧಾನರಾದ ದೇಪಾಪುರಸಿದ್ದಪ್ಪ, ಕೋಡಿಮೋಳೆರಾಜಶೇಖರ, ಎಚ್.ಬಿ.ಗುರುಮಲ್ಲಪ್ಪ, ಎಸ್.ಪಿ.ಸುರೇಶ್ ರನ್ನು ಸನ್ಮಾನಿಸಲಾಯಿತು.

RELATED ARTICLES
- Advertisment -
Google search engine

Most Popular