ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಮಾಯಣ ಮಹಾಭಾರತಗಳು ಈ ದೇಶದ ಆತ್ಮವಾಗಿದ್ದು ನಾಟಕದ ಮೂಲಕ ಸಮಾಜದಲ್ಲಿ ಬೆರೆತು ಹೋಗಿವೆ ಎಂದು ಉದ್ಯಮಿ ಮತ್ತು ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಹೇಳಿದರು.
ಸಾಲಿಗ್ರಾಮ ತಾಲೂಕಿನ ಬೆಣಗನಹಳ್ಳಿ ಗ್ರಾಮದಲ್ಲಿ ಕುರುಕ್ಷೇತ್ರ ನಾಟಕ ಉದ್ಘಾಟನೆ ಮಾಡಿ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶದಲ್ಲಿ ನಾಟಕದ ಕಲೆ ಇನ್ನೂ ಜೀವಂತವಾಗಿದ್ದು ಆಧ್ಯಾತ್ಮಿಕತೆ ಮತ್ತು ಸಮಾಜದ ಉನ್ನತಿಗೆ ಯುವಕರಲ್ಲಿ ಇಂತಹ ಕಲೆಗಳ ಬೆಳವಣಿಗೆಗೆ ನಾಟಕಗಳು ಸಹಕಾರಿಯಾಗಿದ್ದು ಅದರಲ್ಲೂ ಪೌರಾಣಿಕ ನಾಟಕಗಳು ಭಾರತದ ಆಧ್ಯಾತ್ಮಿಕ ಚಿಂತನೆಗಳು ಮತ್ತು ಮೌಲ್ಯಗಳನ್ನು ಬಿತ್ತರಿಸುತ್ತಿದ್ದು ನಾಟಕ ರಂಗದ ಬೆಳವಣಿಗೆಗೆ ಎಲ್ಲರ ಕೊಡುಗೆ ಅವಶ್ಯಕವಾಗಿದೆ ಎಂದು ಹೇಳಿದರು.
ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ ಮಾತನಾಡಿ ನಾಟಕದ ಕಲೆ ಜೀವಂತವಾಗಿರಲು ಗ್ರಾಮೀಣ ಭಾಗದಲ್ಲಿ ಇಂದಿಗೂ ಆಸಕ್ತಿಯಿಂದ ನಾಟಕಗಳನ್ನು ಕಲಿತು ಪ್ರದರ್ಶಿಸುತ್ತಿರುವುದು ಸಂತಸದ ವಿಚಾರವಾಗಿದ್ದು ಸರ್ಕಾರ ಮತ್ತು ಜನಪ್ರತಿನಿಧಿಗಳು ನಾಟಕ ರಂಗದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧುಚಂದ್ರರವರನ್ನು ನಾಟಕ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಹದೇವ ಸದಸ್ಯರಾದ ನಟರಾಜು ಕೃಷ್ಣಶೆಟ್ಟಿ ಜೆಡಿಎಸ್ ಮುಖಂಡರಾದ ವಕೀಲ ತಿಮ್ಮಪ್ಪ, ಪ್ರಭಾಕರ್ ಬೆಣಗನಹಳ್ಳಿ ಪ್ರಸನ್ನ ಶ್ರೀರಂಗಪಟ್ಟಣ ಸಂಜಯ್ ಲಾಲುಸಾಬ್, ದೀಪು ಗೌಡ ಯಜಮಾನರಾದ ನಿಂಗೇಗೌಡ, ಮಾಜಿ ಗ್ರಾಫಂ ಸದಸ್ಯ ಕೃಷ್ಣೆಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.
ಚಿತ್ರ ಶೀರ್ಷಿಕೆ: ಸಾಲಿಗ್ರಾಮ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆದ ಕುರುಕ್ಷೇತ್ರ ನಾಟಕ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಮಾತನಾಡಿದರು.



