Monday, January 19, 2026
Google search engine

Homeಸ್ಥಳೀಯಚುಂಚನಕಟ್ಟೆ ಕಾವೇರಿ ನದಿಯಲ್ಲಿ ಅದ್ದೂರಿ ರಾಮದೇವರ ತೆಪ್ಪೋತ್ಸವ

ಚುಂಚನಕಟ್ಟೆ ಕಾವೇರಿ ನದಿಯಲ್ಲಿ ಅದ್ದೂರಿ ರಾಮದೇವರ ತೆಪ್ಪೋತ್ಸವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಇತಿಹಾಸ ಪ್ರಸಿದ್ದ ರಾಮ ದೇವರ ತೆಪ್ಪೋತ್ಸವ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ರಾತ್ರಿ ನಡೆಯಿತು.
ರಾತ್ರಿ 7 ರ ಸುಮಾರಿನಲ್ಲಿ ಇಲ್ಲಿನ ರಾಮದೇವರ ದೇವಾಲಯದಿಂದ ರಾಮ, ಲಕ್ಷಣ, ಸೀತಾಮಾತೆ ದೇವರುಗಳ ಉತ್ಸವ ಮೂರ್ತಿಗಳನ್ನು ಬಾರಿ ಪಟಾಕಿ ಸಿಡಿಸುವಮೂಲಕ ಜಯ ಘೋಷದೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ತರಲಾಯಿತು.

ಬಳಿಕ ಕಾವೇರಿ ನದಿಯ ದಡದಲ್ಲಿ ದೇವಾಲಯದ ಸಮೀಪವಿರುವ ಆಂಜನೇಯ ಗುಡಿಯ ಬಳಿ ವರ್ಣರಂಜಿತ ವಿದ್ಯುತ್‌ ಲೈಟ್‌ಗಳು ಮತ್ತು ಹೂವಿನ ಅಲಂಕಾರಗಳಿಂದ ಶೃಂಗಾರಗೊಂಡಿದ್ದ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ವಿಶೇಷ ಪೂಜೆ ಮತ್ತು ಮಂಗಳಾರತಿ ಮಾಡಿ ಪ್ರತಿಷ್ಠಾಪಿಸಲಾಯಿತು.
ಆನಂತರ ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಾತ್ರಿ 8 ಸಮಯದಲ್ಲಿ ಕಾವೇರಿ ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ ಮೂರು ಭಾರಿ ತಿರುಗಿಸುತ್ತಿದ್ದಂತೆಯೇ ತೆಪ್ಪದಲ್ಲಿದ್ದ ಹಿರಿಯ ಆಗಮಿಕ ವಿಜಯಕುಮಾರ್,ಅರ್ಚಕ ವೇಣು ಉತ್ಸವ ಮೂರ್ತಿಗಳಿಗೆ ಮಂಗಳಾರತಿ ಮಾಡಿದಾಗ ನೆರೆದಿದ್ದ ಸಾವಿರಾರು ಭಕ್ತಾಧಿಗಳು ರಾಮನಿಗೆ ಜೈಕಾರ, ಶ್ರೀರಮಣನ ಗೋವಿಂದಾ ಗೋವಿಂದಾ ಎಂಬ ಘೋಷಣೆಗಳನ್ನು ಮೊಳಗಿಸಿದರು.


ನಂತರ ದಡಕ್ಕೆ ಬಂದ ಉತ್ಸವ ಮೂರ್ತಿಗಳಿಗೆ ಭಕ್ತರು ಚಪ್ಪಾಳೆ ತಟ್ಟಿ ಸ್ವಾಗತಿಸಿ ತಮ್ಮ ಇಷ್ಟಾರ್ಥವನ್ನು ಇಡೇರಿಸುವಂತೆ ಪ್ರಾರ್ಥಿಸಿ ಪೂಜಾ ಕೈಂಕಾರ್ಯಗಳನ್ನು ಮಾಡಿದ ಬಳಿಕ ಮೂರ್ತಿಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆಗೆದು ಕೊಂಡು ಹೋಗಲಾಯಿತು ಅಲ್ಲದೇ ತೆಪ್ಪೋತ್ಸವದ ಅಂಗವಾಗಿ ಗುಂಡ್ಲುಪೇಟೆಯ ಆನಂದ್ ಎಂಬುವರು ಬಾರಿ ಪಟಾಕಿ ಸಿಡಿಕಿ ತೆಪ್ಪೋತ್ಸೋವಕ್ಕೆ ಕಳೆ ತಂದರು
ಈ ಸಂದರ್ಭದಲ್ಲಿ ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಮಾಜಿ ಅಧ್ಯಕ್ಷ ಸಿ.ವಿ.ಮಂಜುನಾಥ್, ಹುಣಸೂರು ಟಿಎಪಿಸಿಎಂಎಸ್ ಮಾಜಿ ನಿರ್ದೇಶಕಿ ನೇತ್ರಾವತಿ, ಕಾಂಗ್ರೇಸ್ ಮುಖಂಡ ಚೀರನಹಳ್ಳಿ ಆನಂದ್,ಸಾಲಿಗ್ರಾಮ ತಹಸಿಲ್ದಾ‌ರ್ ರುಕೀಯಾ ಬೇಗಂ, ಉಪ ತಹಸಿಲ್ದಾ‌ರ್ ಮಹೇಶ್, ಗ್ರಾಮ ಅಧಿಕಾರಿಗಳಾದ ಮೌನೇಶ್, ಸುನೀಲ್, ದೇವಾಲಯದ ಪಾರುಪತ್ತೆದಾರ್ ಗಳಾದ ಯತೀರಾಜ್, ವಿನಯ್, ನಾಡ ಕಚೇರಿಯ ಕೆಸ್ತೂರು ವಿಜಿ, ಅರ್ಚಕರಾದ ವಾಸು, ನಾರಾಯಣ ಅಯ್ಯಂಗಾರ್, ಸೇರಿದಂತೆ ಇನ್ನಿತರರು ಇದ್ದರಲ್ಲದೇ ತೆಪ್ಪೋತ್ಸಕ್ಕೆ ಬಂದ ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಮುನ್ನಚ್ವರಿಕೆಯ ಕ್ರಮವಾಗಿ ಸಾಲಿಗ್ರಾಮ ಪೊಲೀಸ್ ಠಾಣೆಯ ನಿರೀಕ್ಷ ವಿ.ಎಸ್. ಶಶಿಕುಮಾರ್, ಮುಖ್ಯಪೇದೆಗಳಾದ ದೊಡ್ಡಸ್ವಾಮಿ, ರಮೇಶ್, ರಘು, ಅವಿನಾಶ್, ಗೋವಿಂದರಾಜು, ಬಸವರಾಜು, ರಾಕೇಶ್, ನಾಗರಾಜು, ರವಿ ಕುಮಾರ್ , ಹರೀಶ್ ಅವರು ಬಾರಿ ಬಿಗಿ ಭದ್ರತೆ ಏರ್ಪಡಿಸಿದ್ದರು.

ತಹಸೀಲ್ದಾರ್ ಕಾರ್ಯ ಶ್ಲಾಘನೆ 

ಮುಸ್ಲಿಂ ಸಮುದಾಯದವರಾದರು ಕೂಡ ಚುಂಚನಕಟ್ಟೆಯ ದನಗಳ ಜಾತ್ರೆ, ಸೀತಾ ಕಲ್ಯಾಣ, ಶ್ರೀರಾಮ ರಥೋತ್ಸವ, ತೆಪ್ಪೋತ್ಸವ ಕಾರ್ಯಕ್ರವನ್ನು ಶಾಸಕರು ಸ್ಥಳಿಯ ಜನಪತ್ರಿನಿಧಿಗಳು, ಅಧಿಕಾರಿ ವರ್ಗದವರ ಸಹಕಾರ ದಿಂದ ಅಚ್ಚುಕಟ್ಟಾಗಿ ಮಾಡಿದ ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ ಅವರ ಕಾರ್ಯ ಶ್ಲಾಘನೀಯವಾಗಿದ್ದು ಇವರಿಗೆ ಸಾಥ್ ನೀಡಿದ ಉಪತಹಸೀಲ್ದಾರ್ ಮಹೇಶ್, ಪಾರುಪತ್ತೆದಾರರಾದ ಯತೀರಾಜ್, ವಿನಯ್ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇನೆ
ಚುಂಚನಟ್ಟೆ ಸಿ.ವಿ.ಮಂಜುನಾಥ್, ಕುಪ್ಪೆ ಗ್ರಾ.ಪಂ.ಮಾಜಿ ಅಧ್ಯಕ್ಷ

RELATED ARTICLES
- Advertisment -
Google search engine

Most Popular