ವರದಿ :ಸ್ಟೀಫನ್ ಜೇಮ್ಸ್.
ಮೂಡಲಗಿ: ‘ವಾಹನ ಚಾಲನಾ ಪರವಾನಗಿ ಪಾಸಾಗಲುಇನ್ನು ಮುಂದೆ ಮ್ಯಾನ್ಯುಯೆಲ್ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತಿದ್ದು, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ವಾಹನ ಚಾಲನಾ ಪರವಾನಗಿ ನೀಡಲಾಗುತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲ್ಲೂಕಿನ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ನೂತನ ಕಟ್ಟಡ ಮತ್ತು ಚಾಲನಾ ಪಥವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.ಡೈವಿಂಗ್ ಟ್ರ್ಯಾಕ್‌ನಲ್ಲಿ ಮೊದಲು ಅಧಿಕಾರಿಗಳೇ ನೋಡುತ್ತಿದ್ದರು. ಇನ್ನು ಮುಂದೆ ಹಾಗೆ ಮಾಡಲು ಬರುವುದಿಲ್ಲ. ಎಲ್ಲ ಟ್ರ್ಯಾಕ್‌ಗಳಲ್ಲಿ ಸೆನ್ಸಾರ್ ಅಳವಡಿಸಲಾಗಿದೆ. ಅಲ್ಲಿ ಚೆನ್ನಾಗಿ ಡ್ರೈವಿಂಗ್ ಮಾಡಿದರೆ ಮಾತ್ರ ಪಾಸ್ ಆಗುತ್ತಾರೆ. ಪರವಾನಗಿ ಸಿಗುತ್ತದೆ. ಇಲ್ಲವಾದರೆ ಪರವಾನಿಗೆ ದೊರೆಯುವದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೆವಿ ವೆಹಿಕಲ್‌ಗಳಿಗೆ 3 ಎಕರೆ ಜಮೀನು ಜಾಗವನ್ನು ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶೇಷ ಆಸಕ್ತಿ ವಹಿಸಿ ಈ ಸ್ಥಳವನ್ನು ಕೊಡಿಸಿದ್ದಾರೆ. ಇದರಿಂದಾಗಿ ಅರಭಾವಿ ಪಟ್ಟಣದ ಪಕ್ಕದಲ್ಲಿ ಈ ಕಚೇರಿ, ಚಾಲನಾ ಪಥ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ. ಈ ಭಾಗದಲ್ಲಿರುವ 3 ತಾಲೂಕಿನ ಜನತೆಗೆ ಬಹಳ ಅನುಕೂಲವಾಗಿದೆ ಆರ್‌ಟಿಓ ಕಚೇರಿ, ಡ್ರೈವಿಂಗ್ ಟೆಸ್ಟ್ ರಾಜ್ಯದಲ್ಲಿ ಒಟ್ಟು 45 ಇದ್ದು, ಇದರಲ್ಲಿ 10 ಪ್ರಾರಂಭವಾಗಿವೆ. ಉಳಿದಿರುವ 35ರ ಕಾಮಕಾರಿಗಳ ಕೆಲಸ ಮುಗಿಯುವ ಹಂತದಲ್ಲಿವೆ. ಇವುಗಳನ್ನು ಕೂಡ ಸಿಎಂ ಸಿದ್ದರಾಮಯ್ಯನವರು ಆದಷ್ಟು ಬೇಗ ಕೇಂದ್ರ ಸ್ಥಳದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಅರಭಾವಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ರೇಣುಕಾ ಮಾದರ, ಧಾರವಾಡ ಅಪರ್ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ, ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ್ ಕುಲಕರ್ಣಿ, ಹುಬ್ಬಳ್ಳಿ ಮುಖ್ಯ ಕಾಮಗಾರಿ ಅಭಿಯಂತರ ಸೋಮಣ್ಣ ಅಂಗಡಿ, ಪ್ರಭಾ ಶುಗರ್ಸ ಅಧ್ಯಕ್ಷ ಶಿದ್ದಿಂಗಪ್ಪ ಕಂಬಳಿ, ಆಂಜನೇಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿಲಕುಂದಿ, ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕ ಮುತ್ತೆಪ್ಪ ಜಲ್ಲಿ, ರೈತ ಮುಖಂಡ ಗಣಪತಿ ಇಳಿಗೇರ, ಬೆಮುಲ್ ನಿರ್ದೇಶಕ ಬಸವರಾಜ ಮಾಳೆದವರ, ರಮೇಶ ಸಂಪಗಾಂವಿ, ರಮೇಶ ಮಾದರ, ಪಟ್ಟಣ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



