ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳು ಬೆಟ್ಟದಿಂದ ಪಾದಯಾತ್ರೆ ಹೋಗುತ್ತಿದ್ದ ಭಕ್ತನನ್ನು ಕೊಂದಿದ್ದ, ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಈ ಚಿರತೆ ತುಂಬಾನೇ ಆತಂಕ ಸೃಷ್ಟಿಯಾಗಿತ್ತು. ಚಿರತೆ ಸೆರೆಗಾಗಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸತತ ನಿಗಾ ವಹಿಸಿದ್ದರು.
ಇದೀಗ ಅಂತಿಮವಾಗಿ ಚಿರತೆ ಸೆರೆಸಿಕ್ಕಿದೆ ಇನ್ನೂ, ಮೃತನ ಕುಟುಂಬದ ಸದಸ್ಯರಿಗೆ 5 ಲಕ್ಷ ಪರಿಹಾರ ಕೂಡ ಘೋಷಣೆ ಮಾಡಲಾಗಿದ್ದು, ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಗೆ ಕಣ್ಗಾವಲು ವಹಿಸಿದ್ದರು. ಇದೀಗ ಅರವಳಿಕೆ ಕೊಟ್ಟು ಚಿರತೆಯನ್ನು ಸೆರೆಹಿಡಿದಿದ್ದು, ಸುಮಾರು ಎರಡರಿಂದ ಮೂರು ವರ್ಷದ ಗಂಡು ಚಿರತೆ ಎಂದು ತಿಳಿದು ಬಂದಿದೆ.
ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಚಿರತೆ ಸ್ಥಳಾಂತರಿಸಲು ಅರಣ್ಯಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಚಿರತೆ ಸೆರೆಯಿಂದ ಭಕ್ತರಲ್ಲಿ ಮನೆಮಾಡಿದ್ದ ಆತಂಕ ನಿವಾರಣೆಯಾಗಿದೆ. ಈ ವೇಳೆ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.



